ರಾಷ್ಟ್ರೀಯ

ಬಾನಂಗಳದಲ್ಲೂ ಭಾರತದ ಸ್ವಾತಂತ್ರ್ಯ ಸಂಭ್ರಮ

Share news

ಭಾರತ ತನ್ನ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಬಾನಂಗಳದಲ್ಲೂ ಸ್ವಾತಂತ್ರ್ಯದ ಕಹಳೆ ಮೊಳಗುತ್ತಿದೆ. ಸ್ಪೇಸ್‌ ಕಿಡ್ಸ್‌ ಇಂಡಿಯಾ ಸಂಸ್ಥೆಯು ರಾಷ್ಟ್ರ ಧ್ವಜವನ್ನು ಬಲೂನ್‌ ಮೂಲಕ ಭೂಮಿಯಿಂದ 1,06,000 ಅಡಿ ಎತ್ತರಕ್ಕೆ 30ಕಿ.ಮಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ವಿಶಿಷ್ಟವಾಗಿ ಸ್ವಾತಂತ್ರ್ಯದ ದಿನವನ್ನು ಆಚರಿಸಿದೆ. ದೇಶದ ಯುವ ವಿಜ್ಞಾನಿಗಳನ್ನು ಸೃಷ್ಟಿಸುವ ಈ ಸಂಸ್ಥೆಯು 750 ವಿದ್ಯಾರ್ಥಿನಿಯರಿಂದ ಇತ್ತಿಚೆಗೆ ಆಜಾದ್ ಸ್ಯಾಟ್ ಅನ್ನು ಅಭಿವೃದ್ಧಿ ಪಡಿಸಿದೆ.

ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಸ್ಪೇಸ್‌ ಸ್ಟೇಷನ್) ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು, ” ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಅಭಿನಂದಿಸಲು ಸಂತೋಷವಾಗುತ್ತದೆ ಮತ್ತು ದಶಕಗಳಿಂದ ಅಂತರರಾಷ್ಟ್ರೀಯ ಏಜೆನ್ಸಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆಗೆ ಅನೇಕ ಬಾಹ್ಯಾಕಾಶ ಮತ್ತು ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದೆ.“ಇಸ್ರೋ ಮುಂಬರುವ NISAR ಅರ್ಥ್ ಸೈನ್ಸ್ ಮಿಷನ್‌ನ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸಹಕಾರವು ಇಂದಿಗೂ ಮುಂದುವರೆದಿದೆ, ಅದು ನಮಗೆ ವಿಪತ್ತುಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ನಮ್ಮ ಬದಲಾಗುತ್ತಿರುವ ಹವಾಮಾನದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ.” ಎಂದು ಗಗನಯಾತ್ರಿ ಸುಮಂತಾ ಹೇಳಿದ್ದಾರೆ. ಇದು ಭಾರತಕ್ಕೆ ನಿಜಕ್ಕೂ ಹೆಮ್ಮೆಯ ಸಂಗತಿ.

ಅಷ್ಟೇ ಅಲ್ಲದೆ ಭಾರತೀಯ-ಅಮೆರಿಕನ್ ಗಗನಯಾತ್ರಿ ರಾಜಾ ಚಾರಿ ಕೂಡ ಭಾರತಕ್ಕೆ ಶುಭಕೋರಿದ್ದು,“ನಾಸಾ ಮತ್ತು ಇಸ್ರೋ ಸಹಕಾರದ ಸುದೀರ್ಘ ಇತಿಹಾಸವನ್ನು ಹೊಂದಿವೆ, ಭಾರತದಲ್ಲಿ ನಾಸಾ ಇಸ್ರೋದೊಂದಿಗೆ ಸೌಂಡಿಂಗ್ ರಾಕೆಟ್‌ಗಳಲ್ಲಿ ಕೆಲಸ ಮಾಡಿದ ಬಾಹ್ಯಾಕಾಶ ಯುಗದ ಆರಂಭಿಕ ದಿನಗಳು ಈಗಲೂ ಹಸಿರಾಗಿದೆ.. ನಾವು ಜಂಟಿ ಬಾಹ್ಯಾಕಾಶ ಮತ್ತು ಭೂ ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಸಹಕಾರವು ಇಂದಿಗೂ ಮುಂದುವರೆದಿದೆ” ಎಂದಿದ್ದಾರೆ.

ಹೀಗೆ ಬಾಹ್ಯಾಕಾಶದಲ್ಲೂ ಭಾರತದ ಹೆಸರು ಪ್ರತಿಧ್ವನಿಸುತ್ತಿದೆ. ಎಲ್ಲೇಡೆ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಹಳ್ಳಿ ಹಳ್ಳಿಯಲ್ಲೂ ಬಾನಂಗಳದಲ್ಲೂ ತ್ರಿವರ್ಣ ಬಣ್ಣವೇ ತುಂಬಿ ದೇಶದ ಅಮೃತ ಮಹೋತ್ಸವದ ಆಚರಣೆಗೆ ಇನ್ನಷ್ಟು ಶಕ್ತಿ ತುಂಬಿ ಜಗತ್ತೇ ತಿರುಗಿ. ನೋಡುವಂತೆ ಮಾಡಿದೆ. ಇದು ಭಾರತದ ಅಮೃತ ಘಳಿಗೆಯೇ ಹೌದು..


Share news

Related Articles

Leave a Reply

Your email address will not be published. Required fields are marked *

Back to top button