ರಾಷ್ಟ್ರೀಯ

750 ವಿದ್ಯಾರ್ಥಿನಿಯರು ನಿರ್ಮಿಸಿದ ‘ಆಜಾದಿಸ್ಯಾಟ್’ ಇಸ್ರೋದ ಎಸ್ ಎಸ್ ಎಲ್ ವಿ ರಾಕೆಟ್ ನಲ್ಲಿ ಉಡಾವಣೆ

Share news

ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಶಾಲೆಗಳ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ  ‘ಆಜಾದಿಸ್ಯಾಟ್’ ಇಸ್ರೋದ ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ (SSLV) ಉಡಾವಣೆಗೆ ಸಿದ್ಧವಾಗಿದೆ. ಸುಮಾರು 8 ಕೆಜಿ ತೂಕದ ಉಪಗ್ರಹವು 75 ಫೆಮ್ಟೊ ಪ್ರಯೋಗಗಳನ್ನು ಹೊಂದಿದ್ದು, ತನ್ನದೇ ಆದ ಸೌರ ಫಲಕ ಒಳಗೊಂಡ ಚಿತ್ರಗಳನ್ನು ಕ್ಲೀಕ್ಕಿಸಲು ಸೆಲ್ಫಿ ಕ್ಯಾಮೆರಾಗಳು ಹಾಗೂ ದೀರ್ಘ ಶ್ರೇಣಿಯ ಸಂವಹನ ಟ್ರಾನ್ಸ್ ಪಾಂಡರ್ ಗಳನ್ನು ಹೊಂದಿರುವ ವಿಶಿಷ್ಟವಾದ ರಾಕೆಟ್ ಇದಾಗಿದೆ.

ವಿಶ್ವ ಸಂಸ್ಥೆಯ ಈ ವರ್ಷದ ಧ್ಯೇಯವಾಕ್ಯ ಬಾಹ್ಯಾಕಾಶದಲ್ಲಿ ಮಹಿಳೆಯರು ಎಂದಿರುವುರಿಂದ ವಿಜ್ಞಾನ, ತಂತ್ರಜ್ಞಾನ,ಗಣಿತ ಶಾಸ್ತ್ರಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮೊದಲ ಬಾರಿಗೆ ಮಹಿಳೆಯರೇ ಅಭಿವೃದ್ಧಿ ಪಡಿಸಿದ ಉಪಗ್ರಹವಾಗಿದೆ ಎಂದು ಸ್ಪೇಸ್ ಕಿಡ್ಜ್ ಇಂಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ರಿಫಾತ್ ಶಾರೂಕ್ ತಿಳಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 500 ಕೆಜಿಗಿಂತ ಕಡಿಮೆ ತೂಕ ಹೊಂದಿರುವ ಉಪಗ್ರಹವನ್ನು ಭೂಮಿಯ ಕಕ್ಷೆಯಲ್ಲಿ ಇರಿಸಲು ಅಭಿವೃದ್ಧಿ ಪಡಿಸಿದ ಎಸ್ ಎಸ್ ಎಲ್ ವಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ ಹಾಗೂ ಇಸ್ರೋ ಪ್ರಕಾರ ಬೆಳೆಯುತ್ತಿರುವ ಬಾಹ್ಯಾಕಾಶ ಬೇಡಿಕೆಗಳಿಗೆ ಸ್ಪಂದಿಸಲು ಇಂತಹ ಎಸ್ ಎಸ್ ಎಲ್ ವಿ ರಾಕೆಟ್ ಗಳನ್ನು ಕಡಿಮೆ ಅವಧಿಯಲ್ಲಿ ತಯಾರಿಸಬಹುದು ಎಂದಿದೆ.

ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಹಿದ ಎಸ್ ಎಸ್ ಎಲ್ ವಿ ಆಜಾದಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಸೇರಿಸುವುದು ಹರ್ಷ ತಂದಿದೆ ಎಂದಿದೆ. ಇದು ಬಾಹ್ಯಾಕಾಶ ಸಾಧನೆಯಲ್ಲಿ ಭಾರತದ ಗರಿಮೆಯನ್ನು ಹೆಚ್ಚಿಸಲಿದೆ.


Share news

Related Articles

Leave a Reply

Your email address will not be published. Required fields are marked *

Back to top button