ರಾಷ್ಟ್ರೀಯ
Trending

ಇಸ್ರೋದಿಂದ 19 ರಾಷ್ಟ್ರಗಳ 31 ಪ್ರತಿನಿಧಿಗಳಿಗೆ ನ್ಯಾನೋ ಸ್ಯಾಟಲೈಟ್ ಅಸೆಂಬ್ಲಿ ಕೋರ್ಸ್‌ಗಳು ಮತ್ತು ಸಂಬಂಧಿತ ತರಬೇತಿ

Share news

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 19 ರಾಷ್ಟ್ರಗಳ 31 ಪ್ರತಿನಿಧಿಗಳಿಗೆ ನ್ಯಾನೋ ಸ್ಯಾಟಲೈಟ್ ಅಸೆಂಬ್ಲಿ ಕೋರ್ಸ್‌ಗಳು ಮತ್ತು ಸಂಬಂಧಿತ ತರಬೇತಿಯನ್ನು ಆರಂಭಿಸಿದೆ. ಭಾರತದ ಉಪಗ್ರಹಗಳನ್ನು ವೈವಿಧ್ಯಮಯಗೊಳಿಸುವ ಮತ್ತು ಉನ್ನತೀಕರಿಸುವ ಜವಾಬ್ದಾರಿಯನ್ನು ಹೊಂದಿರುವ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಈ ತರಬೇತಿಗಳನ್ನು ನೀಡುತ್ತಿದೆ.

ಎರಡು ತಿಂಗಳ ಅವಧಿಯ ತರಬೇತಿಯಾಗಿದ್ದು ಉಪಗ್ರಹ ತಂತ್ರಜ್ಞಾನ, ನ್ಯಾನೊ ಸ್ಯಾಟಲೈಟ್ ವಿನ್ಯಾಸ ಮತ್ತು ಪರೀಕ್ಷೆಯ ಪಾಠಗಳನ್ನು ಮಾಡಲಾಗುತ್ತದೆ. ಈ ನ್ಯಾನೊಸಾಟಲೈಟ್‌ಗಳನ್ನು 10 ಕೆಜಿಗಿಂತ ಕಡಿಮೆ ತೂಕ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಈ ತರಬೇತಿಯನ್ನು ಇಸ್ರೋನಿಂದ ಯುನಿಸ್ಪೇಸ್ ನ್ಯಾನೊ ಸ್ಯಾಟಲೈಟ್ ಅಸೆಂಬ್ಲಿ ಮತ್ತು ತರಬೇತಿ ಎಂದು ಕರೆಯಲಾಗುತ್ತದೆ. ಈ ತರಬೇತಿ ಕಾರ್ಯಕ್ರಮವನ್ನು ಯುಆರ್‌ ರಾವ್ ಉಪಗ್ರಹ ಕೇಂದ್ರ, ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ, ಇಸ್ರೋ ಪ್ರಧಾನ ಕಚೇರಿ, ಇಸ್ರೊ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ವಿಜ್ಞಾನಿಗಳು ನಡೆಸಿಕೊಡುತ್ತಾರೆ.ಇಲ್ಲಿಯವರೆಗೆ, ಮೂರು ಆವೃತ್ತಿಗಳಲ್ಲಿ ತರಬೇತಿ ನೀಡಲಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button