ರಾಷ್ಟ್ರೀಯ

ಹರ್ ಘರ್ ತಿರಂಗಾ ಅಭಿಯಾನದಡಿ 6 ಕೋಟಿಗೂ ಅಧಿಕ ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ಅಪ್ ಲೋಡ್ 

Share news

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡ ಆಗಸ್ಟ್ 13ರಿಂದ 15ರ ವರೆಗೆ ರಾಷ್ಟ್ರಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಅಭಿಯಾನವು ಯಶಸ್ವಿಯಾಗಿದ್ದು, ಹಳ್ಳಿಯಿಂದ ಹಿಡಿದು ಪಟ್ಟಣ ಸೇರಿದಂತೆ ಎಲ್ಲೇಡೆ ರಾಷ್ಟ್ರಧ್ವಜ ಹಾರಿಸಿ ಭಾರತೀಯರೆಲ್ಲರೂ ಒಂದಾಗಿ ಸ್ವಾತಂತ್ರ್ಯದ ಸಂಭ್ರಮವನ್ನು ಅಭೂತಪೂರ್ವವಾಗಿ ಆಚರಿಸಿದ್ದು, www.harghartiranga.com ವೆಬ್ ಸೈಟ್ ನಲ್ಲಿ ಇದುವರೆಗೆ 6 ಕೋಟಿಗೂ ಅಧಿಕ ಜನ ರಾಷ್ಟ್ರಧ್ವಜದೊಂದಿಗಿನ ಸೆಲ್ಫಿಯನ್ನು ಮಾಡಿದ್ದಾರೆ.

ಕೇಂದ್ರ ಸಂಸ್ಕೃತಿ ಸಚಿವಾಲಯ ಹಮ್ಮಿಕೊಂಡಿದ್ದ ಅಭಿಯಾನವು ಯಶಸ್ವಿಯಾಗಲು ಸರ್ಕಾರದ ಮನವಿಗೆ ಸ್ಪಂದಿಸಿದ ಎಲ್ಲಾರಿಗೂ ಅಭಿನಂದನೆ ತಿಳಿಸಿದ್ದಾರೆ. ದಾಖಲೆ ಎಂಬಂತೆ 6 ಕೋಟಿ ಜನ ಹಿರಿಯರಿಂದ ಹಿಡಿದು ಕಿರಿಯ ವಯಸ್ಸಿನವರೆಗೂ ಎಲ್ಲಾರೂ ತಮ್ಮ ಮನೆಗಳಲ್ಲಿ,ಅಂಗಡಿಗಳಲ್ಲಿ ತಿರಂಗಾವನ್ನು ಹಾರಿಸಿ ಫೋಟೋವನ್ನು ಆಪ್ ಲೋಡ್ ಮಾಡುವ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಯಾಗಿಸಿದ್ದು, ಪ್ರತಿಯೊಬ್ಬರಿಗೂ ಇ-ಪ್ರಮಾಣ ಪತ್ರ ನೀಡಲಾಗಿದೆ.

ಹಳ್ಳಿಯ ಜನರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಅತ್ಯಂತ ಸಂತಸದಿಂದ ದೇಶ ಪ್ರೇಮವನ್ನು ಮೆರೆದಿದ್ದಾರೆ. ಪ್ರತಿಯೊಬ್ಬರಲ್ಲೂ ದೇಶ ಭಕ್ತಿಯನ್ನು ಹೆಚ್ಚಿಸುವ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಮಹತ್ವದ ಅಭಿಯಾನವಾಗಿ ಹರ್ ಘರ್ ತಿರಂಗಾ ಜನರಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸಿ ದೇಶದಾದ್ಯಂತ ಯಶಸ್ವಯಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button