ರಾಷ್ಟ್ರೀಯ

ವಿಶ್ವದಾಖಲೆ ಬರೆದ 1 ಕೋಟಿಗೂ ಅಧಿಕ ವಿದ್ಯಾರ್ಥಿಗಳ ದೇಶಭಕ್ತಿ ಗೀತೆಗಳ ಗಾಯನ

Share news

ಭಾರತ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಆಚರಣೆಯನ್ನು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ವಿಶಿಷ್ಟವಾದ ರೀತಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ಮಾಡಲಾಗಿದೆ. ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಏಕಕಾಲದಲ್ಲಿ 6 ದೇಶಭಕ್ತಿ ಗೀತೆಗಳನ್ನು ಹಾಡಿ ವಿಶ್ವದಾಖಲೆ ಬರೆದಿದ್ದಾರೆ.

ಕಾರ್ಯಕ್ರಮ ಸಂದರ್ಭದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ ಲಂಡನ್ ಪ್ರತಿನಿಧಿ ಪ್ರಥಮ್ ಭಲ್ಲಾ ಅವರು ಮುಖ್ಯಮಂತ್ರಿ ಅವರಿಗೆ 1 ಕೋಟಿ ಜನ ಒಕ್ಕೊರಳಿನಿಂದ ಹಾಡಿದ ದೇಶ ಭಕ್ತಿ ಗೀತೆಗಳ ವಿಶ್ವದಾಖಲೆ ಪ್ರಮಾಣ ಪತ್ರ ಹಸ್ತಾಂತರಿಸಿದರು. ಇದೊಂದು ವಿಶಿಷ್ಟವಾದ ದಾಖಲೆಯಾಗಿದ್ದು, ವಿದ್ಯಾರ್ಥಿಗಳೇ ಸೇರಿ ಮಾಡಿದ್ದಾರೆ.

ಒಂದೇ ಜಾಗದಲ್ಲಿ 67 ಸಾವಿರ ಸರ್ಕಾರಿ ಹಾಗೂ 59 ಸಾವಿರ ಖಾಸಗಿ ಶಾಲೆಯ ಮಕ್ಕಳು ಸೇರಿ ರಾಷ್ಟ್ರಗೀತೆ, ಜನಗಮಮನ, ವಂದೇ ಮಾತರಂ ಸೇರಿದಂತೆ 6 ಗೀತೆಗಳನ್ನು ಎಲ್ಲಾರೂ ಒಟ್ಟಾಗಿ ಹಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಅಮೃತ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಣೆ ಮಾಡುವ ಮೂಲಕ ದಾಖಲೆಯನ್ನು ಬರೆದಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button