ರಾಷ್ಟ್ರೀಯ
Trending

ಚೀನಾ ಆಕ್ರಮಣಕ್ಕೆ ತಕ್ಕ ಉತ್ತರ ನೀಡಲು ಸಿದ್ಧ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

Share news

‘ಚೀನಾದ ಯಾವುದೇ ಆಕ್ರಮಣಕ್ಕೂ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧ ಹಾಗೂ ಭೌತಿಕ ಗಸ್ತು ಮತ್ತು ತಾಂತ್ರಿಕ ವಿಧಾನಗಳ ಮೂಲಕ ದೇಶದ ಸಮಗ್ರತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ.’ ಎಂದು ಭಾರತೀಯ ಸೇನೆಯು ಹೇಳಿದೆ.

ಉತ್ತರ ಕಮಾಂಡರ್ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ‘ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನಾದ ಪ್ರಯತ್ನಗಳನ್ನು ಭಾರತವು ತನ್ನ ಸಶಸ್ತ್ರ ಪಡೆಗಳಿಂದ ತ್ವರಿತ, ನಿರ್ಭೀತ ಮತ್ತು ಸಂಯೋಜಿತ ಕ್ರಮದಿಂದ ಎದುರಿಸಲಿದೆ. ಯಾವುದೇ ಪ್ರತಿಕೂಲ ಹಾಗೂ ಆಕ್ರಮಣಕಾರಿ ಪ್ರಯತ್ನಗಳನ್ನು ಸೇನಾಪಡೆಗಳು ದೃಢವಾಗಿ ಹಿಮ್ಮೆಟ್ಟಿಸಲಿವೆ’ ಎಂದು ಹೇಳಿದರು.


Share news

Related Articles

Leave a Reply

Your email address will not be published. Required fields are marked *

Back to top button