ರಾಷ್ಟ್ರೀಯ

ಮಂಕಿಪಾಕ್ಸ್ ತಡೆಗಟ್ಟಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಬಿಡುಗಡೆ

Share news

ಭಾರತದಲ್ಲಿ ದೆಹಲಿ ಹಾಗೂ ಕೇರಳ ಸೇರಿದಂತೆ 8 ಮಂದಿ ಮಂಕಿ ಪಾಕ್ಸ್ ರೋಗಿಗಳು ಪತ್ತೆಯಾಗಿದ್ದಾರೆ. ಹೀಗಾಗಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಕಿ ಪಾಕ್ಸ್ ಕಾಯಿಲೆಯ ಕುರಿತು ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿದೆ. 1970ರಲ್ಲಿ ಮೊದಲ ಬಾರಿಗೆ ಮಂಕಿ ಪಾಕ್ಸ್ ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾಯಿತು. 2003 ರಲ್ಲಿ ಅಮೇರಿಕಾದಲ್ಲಿ ವರದಿಯಾಯಿತು.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಪ್ರಸ್ತುತ ಸರಣಿಯಲ್ಲಿ ಯುರೋಪ್‌ನಿಂದ ಸರಪಳಿಯಂತೆ ಹರಡಿ ಅಮೆರಿಕ, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಪೇನ್, ಸ್ವೀಡನ್, ಆಸ್ಟ್ರೇಲಿಯಾ, ಕೆನಡಾ, ಆಸ್ಟ್ರಿಯಾ ಹೀಗೆ ಅನೇಕ ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಈಗ ಭಾರತದಲ್ಲೂ ಮಂಕಿ ಪಾಕ್ಸ್ ರೋಗ ಕಾಣಿಸಿಕೊಳ್ಳುತ್ತಿದೆ.

ರೋಗದ ಲಕ್ಷಣಗಳು

ಜ್ವರ
ತಲೆನೋವು
ಸ್ನಾಯು ನೋವು ಮತ್ತು ಬೆನ್ನು ನೋವು
ಊದಿಕೊಂಡ ದುಗ್ಧರಸ ಗ್ರಂಥಿಗಳು
ಚಳಿ
ನಿಶ್ಯಕ್ತಿ
ಉಸಿರಾಟದ ಲಕ್ಷಣಗಳು (ಉದಾಹರಣೆಗೆ ನೋಯುತ್ತಿರುವ ಗಂಟಲು ಅಥವಾ ಕೆಮ್ಮು)

ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು

ಮಂಕಿಪಾಕ್ಸ್ ನಿಂದ ರಕ್ಷಿಸಿಕೊಳ್ಳಲು ಹಾಗೂ ರೋಗವನ್ನು ತಡೆಗಟ್ಟಲು ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ https://main.mohfw.gov.in/diseasealerts-0 ಗೆ ಭೇಟಿ ನೀಡಲು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾಡಬೇಕಾದದ್ದು

  1. ರೋಗ ಹರಡದಂತೆ ಸೋಂಕಿತ ವ್ಯಕ್ತಿಯನ್ನು ಇತರರಿಂದ ದೂರವಿರಿಸುವುದು.
  2. ಹ್ಯಾಂಡ್ ಸ್ಯಾನಿಟೈಸರ್ ಬಳಸಿ, ಅಥವಾ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯುವುದು.
  3. ರೋಗಿಗಳಿಂದ ದೂರವಿದ್ದು, ನಿಮ್ಮ ಬಾಯಿಯನ್ನು ಮಾಸ್ಕ್ ನಿಂದ ಮುಚ್ಚುವುದು.
  4. ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲು ಸೋಂಕುನಿವಾರಕಗಳನ್ನು ಬಳಸುವುದು

ಮಾಡಬಾರದು

  1. ಮಂಕಿಪಾಕ್ಸ್‌ ಇದೆ‌ ಎಂದು ತಿಳಿದ ನಂತರ ಅವರೊಂದಿಗೆ ದಿಂಬು, ಹಾಸಿಗೆಗಳು, ಬಟ್ಟೆಗಳು, ಟವೆಲ್‌ಗಳು ಇತ್ಯಾದಿಗಳನ್ನು ಹಂಚಿಕೊಳ್ಳುವುದೆ ಇರುವುದು.
  2. ರೋಗಿಗಳು ಮತ್ತು ಸೋಂಕಿತರಲ್ಲದವರ ಬಟ್ಟೆಯನ್ನು ಒಟ್ಟಿಗೆ ತೊಳೆಯಬಾರದು.
  3. ರೋಗದ ಲಕ್ಷಣವಿದ್ದಾಗ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗಬಾರದು.
  4. ಸೋಂಕಿಗೆ ಒಳಗಾದ ಜನರು ಮತ್ತು ಶಂಕಿತ ರೋಗಿಗಳನ್ನು ಸಹ ಕಳಂಕಗೊಳಿಸಬೇಡಿ. ಅಲ್ಲದೆ, ಯಾವುದೇ ವದಂತಿ ಅಥವಾ ತಪ್ಪು ಮಾಹಿತಿಯನ್ನು ನಂಬಬೇಡಿ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಓದಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಮಂಕಿ ಪಾಕ್ಸ್ ನಿಯಂತ್ರಣ ಮಾಡಲು ಸಾಧ್ಯ.


Share news

Related Articles

Leave a Reply

Your email address will not be published. Required fields are marked *

Back to top button