ರಾಷ್ಟ್ರೀಯ

ಭಾರತದಲ್ಲೇ ತಯಾರಿಸಿದ ಸ್ವದೇಶಿ ರಾಷ್ಟ್ರಧ್ವಜ ಬಳಸುವಂತೆ ಮನವಿ

Share news

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಹರ್ ಘರ್ ತಿರಂಗ ಅಭಿಯಾನ ಪ್ರಾರಂಭಿಸಿದ್ದು,ಮನೆ ಮನೆಗಳಲ್ಲಿ ತ್ರೀ ಚೀನಾದಿಂದ ತಯಾರಾಗಿ ಮಾರಾಟವಾಗುತ್ತಿರುವ ರಾಷ್ಟ್ರಧ್ವಜ ಬಳಸದೆ ಭಾರತದಲ್ಲೇ ತಯಾರಾದ ಧ್ವಜಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.

ಅಜಾದಿ ಕಾ ಅಮೃತಮಹೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲು ನರೇಂದ್ರ ಮೋದಿ ಅವರು ಆರಂಭಿಸಿದ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಮನೆಗಳಲ್ಲಿ ಭಾರತದ ಧ್ವಜ ಹಾರಾಡಲಿದೆ ಇದನ್ನೇ ಬಳಸಿಕೊಂಡು ಚೀನಾ ತನ್ನ ದೇಶದಲ್ಲಿ ತಯಾರಾದ ಭಾರತದ ತಿರಂಗಾವನ್ನು ಮಾರಾಟ ಮಾಡಲು ಮುಂದಾಗಿದೆ. ಹೀಗಾಗಿ ಇದರ ಬಗ್ಗೆ ಅನೇಕರು ಜಾಗೃತಿ ಮೂಡಿಸುತ್ತಿದ್ದು, ಮೇಡ್ ಇನ್ ಇಂಡಿಯಾದ ಕೇವಲ 30 ರೂಪಾಯಿಗಳ ಭಾರತದಲ್ಲೇ ತಯಾರಾದ ರಾಷ್ಟ್ರಧ್ವಜ ಬಳಸಲು ಮನವಿ ಮಾಡಲಾಗಿದೆ.

ಭಾರತ್ ಫ್ಲ್ಯಾಗ್ ಫೌಂಡೇಷನ್ ಸ್ವಯಂ ಸೇವಕರು ಇದರ ಕುರಿತು ಅರಿವು ಮೂಡಿಸಲು ಪುಣೆ ನಿವಾಸಿಗಳಿಗೆ ಸ್ವಯಂ ಸೇವಕರು ಪ್ರತಿ ಮನೆಗಳಿಗೂ ತೆರಳಿ ಕರಪತ್ರಗಳನ್ನು ಹಂಚುತ್ತಿದ್ದಾರೆ. ಚೀನಾ ಈಗಾಗಲೇ ಭಾರತದ ಮಾರುಕಟ್ಟೆಗೆ ಧ್ವಜಗಳನ್ನು ರವಾನಿಸಿದೆ. ಹಾಗಾಗಿ ದೇಶ ವಾಸಿಗಳು ಧ್ವಜವನ್ನು ಖರೀದಿಸುವಾಗ ಎಚ್ಚರಿಕೆಯಿಂದ ಭಾರತದಲ್ಲೇ ತಯಾರಾದ ಧ್ವಜ ಖರೀದಿಸುವಂತೆ ಭಾರತ್ ಫ್ಲ್ಯಾಗ್ ಫೌಂಡೇಷನ್ ಕಾರ್ಯಕಾರಿ ಅಧ್ಯಕ್ಷ ರಾಹುಲ್ ಭಲೆರಾವ್ ಮನವಿ ಮಾಡಿದ್ದಾರೆ.

ಈಗಾಗಲೇ ರಾಷ್ಟ್ರ ಧ್ವಜಕ್ಕೆ ಭಾರೀ ಬೇಡಿಕೆ ಇದ್ದು, ಖರೀದಿ ವೇಳೆ ಭಾರತದಲ್ಲೇ ತಯಾರಿಸಿದ ರಾಷ್ಟ್ರಧ್ವಜ ಖರೀದಿಸಿದರೆ ಮೆಡ್ ಇನ್ ಇಂಡಿಯಾ ಧ್ವಜವೆಂಬ ಹೆಮ್ಮೆಯ ಜೊತೆಗೆ ಆರ್ಥಿಕವಾಗಿ ಹೊಸ ವೇಗ ಸಿಗಲಿದೆ ಹಾಗೂ ಅಲ್ಲ ಭಾರತದ ಹಬ್ಬ ಹರಿದಿನಗಳನ್ನು ಬಳಸಿಕೊಳ್ಳುವ ಚೀನಾಗೆ ತಕ್ಕ ತಿರುಗೇಟು ಸಿಗಲಿದೆ ಎಂದು ರಾಹುಲ್ ಭಲೆರಾವ್ ತಿಳಿಸಿದ್ದಾರೆ.

ಇದುವರೆಗೆ 50 ರಿಂದ 60 ಸಾವಿರ ಧ್ವಜಗಳನ್ನು ಮಾರಾಟ ಮಾಡಲಾಗಿದೆ. ಹೆಚ್ಚಿನ ಬೇಡಿಕೆ ಇದ್ದರೂ ಪೂರೈಸಲಾಗುತ್ತದೆ. ಹೀಗಾಗಿ ಎಲ್ಲರೂ ಸ್ಥಳೀಯವಾಗಿ ನಿರ್ಮಿಸಿರುವ ರಾಷ್ಟ್ರಧ್ವಜ ಬಳಸಲು ಭಾರತ್ ಫ್ಲ್ಯಾಗ್ ಫೌಂಡೇಷನ್ ನ ಗಿರೀಶ್ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಕೈಮಗ್ಗ ಅಥವಾ ವಿದ್ಯುತ್‌ ಮಗ್ಗದಿಂದ ಹತ್ತಿ, ಪಾಲಿಯೆಸ್ಟರ್‌, ಉಣ್ಣೆ ರೇಷ್ಮೆ ಅಥವಾ ಖಾದಿಯಲ್ಲಿ ತಯಾರಿಸಿರುವ ರಾಷ್ಟ್ರಧ್ವಜವನ್ನು ಆಗಸ್ಟ್‌ 13ರಿಂದ 15 ರವರೆಗೆ ಮೂರು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ ಇರುವ ಕೋಟಿಗೂ ಹೆಚ್ಚು ಮನೆಗಳ ಮೇಲೆ ಹಾರಿಸಿ ದೇಶ ಪ್ರೇಮ ಮೆರೆಯಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

ಹೀಗಾಗಿ ಭಾರತದಲ್ಲೇ ತಯಾರಾದ ರಾಷ್ಟ್ರಧ್ವಜವನ್ನು ಬಳಸಿ ಸ್ವಾತಂತ್ರ್ಯದ ಭಾಗವಾಗಿದ್ದ ಸ್ವದೇಶಿ ಆಂದೋಲನಕ್ಕೆ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಇನ್ನಷ್ಟು ಶಕ್ತಿ ನೀಡೋಣ..


Share news

Related Articles

Leave a Reply

Your email address will not be published. Required fields are marked *

Back to top button