ರಾಷ್ಟ್ರೀಯ
Trending

ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ 3ನೇ ಬಾರಿ ಗೆದ್ದ ಮೊದಲ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್

Share news

ಭಾರತದ ಸಂಗೀತ ಸಂಯೋಜಕ ರಿಕ್ಕಿ ಕೇಜ್ 65ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್‌ ನಲ್ಲಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2023 ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿಯಲ್ಲಿ ರಿಕ್ಕಿ ಮತ್ತು ಸ್ಟೀವರ್ಟ್ ಕೋಪ್‌ಲ್ಯಾಂಡ್ ಅವರ ʼಡಿವೈನ್ ʼಟೈಡ್ಸ್‌ʼ ಆಲ್ಬಂ ಅತ್ಯುತ್ತಮವಾಗಿ ಗಮನ ಸೆಳೆಯುವ ಆಡಿಯೋ ವಿಭಾಗದಲ್ಲಿ (Best Immersive Audio Album category) ಆಯ್ಕೆಯಾಗಿತ್ತು.

ರಿಕ್ಕಿ ಕೇಜ್ ಅವರ ಮೂರನೇ ಗ್ರ್ಯಾಮಿ ಪ್ರಶಸ್ತಿ ಇದಾಗಿದ್ದು, ಮೂರು ಬಾರಿ ಗ್ರ್ಯಾಮಿ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಯನ್ನು ರಿಕ್ಕಿ ಕೇಜ್ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ರಿಕ್ಕಿ ಕೇಜ್ 2015ರಲ್ಲಿ ʼವಿಂಡ್ಸ್‌ ಆಫ್‌ ಸಂಸಾರʼ ಹಾಡಿಗೆ ಹಾಗೂ ಗ್ರ್ಯಾಮಿ 2022 ಅವಾರ್ಡ್‌ ಕಾರ್ಯಕ್ರಮದಲ್ಲಿ ʼಡಿವೈನ್ ಟೈಡ್ಸ್ʼ ಆಲ್ಬಂ ಬೆಸ್ಟ್‌ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಕಾರ್ಯಕ್ರಮ ನಡೆದಿದೆ.


Share news

Related Articles

Leave a Reply

Your email address will not be published. Required fields are marked *

Back to top button