ರಾಷ್ಟ್ರೀಯ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಈವರೆಗೆ 1.5 ಲಕ್ಷಕ್ಕೂ ಹೆಚ್ಚು ವಿಮಾನಗಳ ಹಾರಾಟ

Share news

ದೇಶಾದ್ಯಂತ ವೈಮಾನಿಕ ಸಂಪರ್ಕವನ್ನು ಹೆಚ್ಚಿಸುವ ಪ್ರಯತ್ನಗಳನ್ನು ವಿವರಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಅವರು ಕಳೆದ 5 ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿಯಲ್ಲಿ ವಾಯುಯಾನವು ಎಲ್ಲಾ ಜನರಿಗೂ ಕೈಗೆಟುಕವಂತೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದಿವೆ ಮತ್ತು ಕಳೆದ 5 ವರ್ಷಗಳಲ್ಲಿ 1,93,000 ವಿಮಾನಗಳ ಹಾರಾಟ ಪ್ರಾರಂಭಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

2016 ರಲ್ಲಿ ಪ್ರಾರಂಭಿಸಲಾದ ಉಡಾನ್ ಯೋಜನೆಯು ಪ್ರಮುಖವಾಗಿ ದೇಶದ ಎಲ್ಲಾ ವರ್ಗದ ಜನರು ಅಗ್ಗದ ವಿಮಾನ ಪ್ರಯಾಣ ಮೂಲಸೌಕರ್ಯ ಮತ್ತು ವಾಯು ಸಂಪರ್ಕದೊಂದಿಗೆ ಸಾಮಾನ್ಯ ಜನರ ಆಕಾಂಕ್ಷೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. 5 ವರ್ಷಗಳ ಅಲ್ಪಾವಧಿಯಲ್ಲಿ ಇಲ್ಲಿಯವರೆಗೆ 419 ವಿಮಾನ ಮಾರ್ಗಗಳು, ಹೆಲಿಪೋರ್ಟ್‌ಗಳು ಮತ್ತು ವಾಟರ್ ಏರೋಡ್ರೋಮ್‌ಗಳನ್ನು ಒಳಗೊಂಡಂತೆ 67 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ.

ANI ಜೊತೆ ಮಾತನಾಡಿದ ಸಿಂಧಿಯಾ, “ಹೊಸ ಏರ್‌ಲೈನ್ ‘ಆಕಾಶ್ ಏರ್‌ಲೈನ್ಸ್’ ಪ್ರಾರಂಭವಾಗಿದೆ. ಇದು ವಿಮಾನಯಾನ ಸಂಸ್ಥೆಗಳಿಗೆ ಹೊಸ ಉದಯವಾಗಿದೆ. ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ 7 ಸಂಸ್ಥೆಗಳು ಮುಚ್ಚಲಾಗಿದೆ ಇದೊಂದು ಸವಾಲಾಗಿದ್ದು ಆಕಾಶ್ ಮೂಲಕ ಮತ್ತೆ ವಿಮಾನಯಾನ ಹೊಸ ಅಭಿವೃದ್ಧಿಯತ್ತ ಸಾಗಲಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಆಕಾಶ್ ಏರ್ ಲೈನ್ಸ್ 7 ನೇ ನಿಗದಿತ ವಿಮಾನಯಾನ ಸಂಸ್ಥೆಯಾಗಿದ್ದು, ಎಸ್‌ಎನ್‌ವಿ ಏವಿಯೇಷನ್‌ನ ಬ್ರಾಂಡ್ ಹೆಸರಿನೊಂದಿಗೆ ಮುಂಬೈನಲ್ಲಿ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೋಯಿಂಗ್ ಮ್ಯಾಕ್ಸ್ -8 ವಿಮಾನಗಳನ್ನು ಹೊಂದಿದೆ. ಆಕಾಶ್ ಏರ್ ಸಿಂಗಲ್ ಫ್ಲೀಟ್ ಮತ್ತು ಎಲ್ಲಾ ಎಕಾನಮಿ ಸೀಟುಗಳೊಂದಿಗೆ ಕಡಿಮೆ ವೆಚ್ಚದ ವಾಹಕವಾಗಲು ಯೋಜನೆ ರೂಪಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಆಕಾಶ್ ಏರ್ ತನ್ನ ಚಟುವಟಿಕೆಗಳನ್ನು 72 ವಿಮಾನಗಳಿಗೆ ವಿಸ್ತರಿಸಲು ಯೋಜನೆ ಮಾಡಲಾಗಿದೆ,ಇದು ಭಾರತದಲ್ಲಿ ದೇಶೀಯ ವಿಮಾನಯಾನ ಸೇವೆಗಳಿಗೆ ಗಮನಾರ್ಹವಾಗಿ ಉತ್ತೇಜ ನೀಡಲಿದೆ ಮತ್ತು ಭಾರತದ ವಿಮಾನಯಾನ ಹೊಸ ದಿಕ್ಕು ಪಡೆಯಲಿದೆ.


Share news

Related Articles

Leave a Reply

Your email address will not be published. Required fields are marked *

Back to top button