ರಾಷ್ಟ್ರೀಯ

ಹೆಣ್ಣು ಮಕ್ಕಳ ಭವಿಷ್ಯವನ್ನು ಸದೃಢಗೊಳಿಸುವ ಸುಕನ್ಯಾ ಸಮೃದ್ಧಿ ಯೋಜನೆ

Share news

ಹೆಣ್ಣು ಮಕ್ಕಳಿಗಾಗಿ, ಸಂಪಾದಿಸುವ ಹಣದಲ್ಲೇ ಉಳಿತದ ಯೋಜನೆಯೊಂದಿಗೆ ಉಜ್ವಲ ಭವಿಷ್ಯ ಕಟ್ಟಿಕೊಡಲು ಭಾರತ ಸರ್ಕಾರ 2015 ರಲ್ಲಿ ಪ್ರಾರಂಭಿಸಿದ ವಿಶಿಷ್ಟವಾದ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ(Sukanya Samriddhi Yojana). 10 ವರ್ಷದೊಳಗಿನ ಹೆಣ್ಣು ಮಕ್ಕಳ ಪೋಷಕರು ಅಧಿಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಸುಕಾನ್ಯ ಸಮೃದ್ಧಿ ಖಾತೆಯನ್ನು ತೆರೆಯುವ ಅವಕಾಶ ಕಲ್ಪಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೊಜನೆಯ ಮೂಲಕ ಹಲವಾರು ವಿನಾಯಿತಿಯನ್ನು ಪಡೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯು ತೆರಿಗೆ-ಮುಕ್ತ ಆದಾಯವನ್ನು ನೀಡುತ್ತದೆ. 1961 ರ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಅಡಿಯಲ್ಲಿ, ಒಂದು ಹಣಕಾಸಿನ ವರ್ಷದಲ್ಲಿ ಒಂದು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ರೂ 1.5 ಲಕ್ಷದವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ ಪ್ರಕಾರ ಒಬ್ಬ ವ್ಯಕ್ತಿಯು ತಿಂಗಳಿಗೆ ರೂ 12,500 ಹೂಡಿಕೆ ಮಾಡಿದರೆ, ಅವರು ತಮ್ಮ ಹೆಣ್ಣು ಮಗುವಿಗೆ ಸರಿಸುಮಾರು ರೂ 64 ಲಕ್ಷವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದು ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯಡಿ ಅನುಮತಿಸಲಾದ ಗರಿಷ್ಠ ತೆರಿಗೆ-ಮುಕ್ತ ಹಣವಾಗಿದೆ. ಹಣಕಾಸು ವರ್ಷದ ಎರಡನೇ ಕ್ವಾರ್ಟರ್‌ ನ ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರವು 7.6% ಆಗಿದೆ. ಇದು ಸರಾಸರಿ ಹಣದುಬ್ಬರ ದರಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಆದ್ದರಿಂದ, ಹೆಣ್ಣು ಮಗುವಿಗೆ ಉತ್ತಮ ಆರ್ಥಿಕ ಭವಿಷ್ಯವನ್ನು ಖಾತ್ರಿಪಡಿಸುವ ಉಳಿತಾಯ ಮಾರ್ಗವಾಗಿದೆ.

ಹೆಣ್ಣು ಮಗುವಿನ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆದಾಗ, ಅವರು ಮುಂದಿನ 14 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಆದರೆ ಅವರು ಹೆಣ್ಣು ಮಗುವಿಗೆ 21 ವರ್ಷ ವಯಸ್ಸಾಗುವವರೆಗೆ ತಮ್ಮ ಸಂಪೂರ್ಣ ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ ಶೇಕಡಾ 50 ರಷ್ಟು ಹಣವನ್ನು ಹಿಂಪಡೆಯುವ ಆಯ್ಕೆಯೂ ಇದೆ. ಈ ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ ಮತ್ತು ಸಂಪೂರ್ಣ ಅವಧಿಗೆ 7.60% ಫ್ಲಾಟ್ SSY ಬಡ್ಡಿ ದರವನ್ನು ಸೇರಿಸಿ, ಅಂದಾಜಿನ ಪ್ರಕಾರ ಒಬ್ಬ ವ್ಯಕ್ತಿಯು ಯೋಜನೆಯ ಮುಕ್ತಾಯದ ಸಮಯದಲ್ಲಿ ಸುಮಾರು 64 ಲಕ್ಷ ಹನವನ್ನು ಪಡೆಯಬಹುದು.

ಸುಕನ್ಯಾ ಸಮೃದ್ಧಿ ಖಾತೆ ತೆಗೆಯುವ ವಿಧಾನ :

ಮಗುವಿನ ಪೋಷಕರು ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಮಗುವಿನ ಜನ್ಮ ಪ್ರಮಾಣ ಪತ್ರ(Birth Certificate) ವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇದರ ಜೊತೆಗೆ ಫೋಷಕರ ಗುರುತಿನ ಚೀಟಿ (Identity Card) ಹಾಗೂ ಮನೆಯ ವಿಳಾಸದ(Address Proof) ದಾಖಲೆಗಳನ್ನು ಸಹ ನೀಡಬೇಕು..ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ಹೆಣ್ಣು ಮಗುವಿನ ಹೆಸರಿನಲ್ಲಿಯೇ ತೆರೆಯಬೇಕು, ಹಾಗೂ ಒಂದು ಮಗುವಿನ ಹೆಸರಿನಲ್ಲಿ ಕೇವಲ ಒಂದು ಅಕೌಂಟ್ ಮಾತ್ರ ಓಪನ್ ಮಾಡಲು ಅವಕಾಶವಿದೆ. ಆದರೆ ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದರೆ ಈ ಯೋಜನೆ ಲಾಭ ಪಡೆಯಬಹುದು

ಇನ್ನು ವರ್ಷಕ್ಕೆ 250 ರೂಗಳನ್ನು ಕಟ್ಟದಿದ್ದಲ್ಲಿ ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ,  ಖಾತೆ ನಿಷ್ಕ್ರಿಯಗೊಳ್ಳಲಿದೆ. ಒಂದು ವೇಳೆ ಈ ರೀತಿ ನಿಷ್ಕ್ರಿಯಗೊಂಡರೆ ಖಾತೆ ತೆರೆದ 15 ವರ್ಷದ ಒಳಗೆ 50ರೂ ದಂಡವನ್ನು ಕಟ್ಟಿ ಪುನಃ ಖಾತೆಯನ್ನು ಸಕ್ರಿಯಗೊಳಿಸಿ ಬಳಕೆ ಮಾಡಬಹುದು. ಹಾಗಾಗಿ ಪ್ರತಿ ವರ್ಷ 250 ರೂಗಳನ್ನು ಕಡ್ಡಾಯವಾಗಿ ಖಾತೆಗೆ ಜಮಾ ಮಾಡಬೇಕು. ಇನ್ನು ಈ ಯೋಜನೆಯ ಅಡಿಯಲ್ಲಿ ಯಾವುದೇ ಸಾಲ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರದ ಉತ್ತಮ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ. ಇದನ್ನು ಜನರು ಬಳಸಿ ಪ್ರಯೋಜನ ಪಡೆದುಕೊಳ್ಳಬಹುದು.


Share news

Related Articles

Leave a Reply

Your email address will not be published. Required fields are marked *

Back to top button