ರಾಷ್ಟ್ರೀಯ

ರಾಷ್ಟ್ರಧ್ವಜವನ್ನು ಮಡಿಚುವ ಕ್ರಮ ತಿಳಿಸಿದ ಕೇಂದ್ರ ಸರ್ಕಾರ

Share news

ಭಾರತದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗ ಅಭಿಯಾನದ’ ಮೂಲಕ ತ್ರಿವರ್ಣ ಧ್ವಜವನ್ನು ಮನೆ ಮನೆಯಲ್ಲಿ ಹಾರಿಸುವ ದೇಶಭಕ್ತಿಯನ್ನು ಮನೆಗಳಲ್ಲಿ ಬೆಳೆಗುವ ವಿಶಿಷ್ಟವಾದ ಉಪಕ್ರಮ ಆರಂಭಿಸಿದೆ.

ಆಗಸ್ಟ್ 13 ರಿಂದ ಆಗಸ್ಟ್ 15 ರ ನಡುವೆ ರಾಷ್ಟಧ್ವಜ ಹಾರಿಸಲು ತಿಳಿಸಲಾಗಿದೆ. ಸಂಸ್ಕೃತಿ ಸಚಿವಾಲಯವು ರಾಷ್ಟ್ರಧ್ವಜವನ್ನು ಮಡಚಲು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಲು ಕೆಲವು ಕ್ರಮಗಳನ್ನು ಒದಗಿಸಿದೆ. ರಾಷ್ಟ್ರಧ್ವಜವು ರಾಷ್ಟ್ರದ ಹೆಮ್ಮೆಯ ಸಂಕೇತವಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಇಡಬೇಕು ಎಂದು ತಿಳಿಸಿದೆ.

ರಾಷ್ಟ್ರಧ್ವಜದ ಪ್ರದರ್ಶನಕ್ಕಾಗಿ ಎಲ್ಲಾ ಕಾನೂನುಗಳು, ಸಂಪ್ರದಾಯಗಳು, ಆಚರಣೆಗಳು ಮತ್ತು ಸೂಚನೆಗಳನ್ನು ಒಟ್ಟುಗೂಡಿಸಲು ಭಾರತದ ಧ್ವಜ ಸಂಹಿತೆಯನ್ನು ಪರಿಚಯಿಸಲಾಯಿತು. ಇದು ಖಾಸಗಿ, ಸಾರ್ವಜನಿಕ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಧ್ವಜದ ಪ್ರದರ್ಶನವನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ.

ಭಾರತದ ಧ್ವಜ ಸಂಹಿತೆಯು ಜನವರಿ 26, 2002 ರಂದು ಜಾರಿಗೆ ಬಂದಿತು ಮತ್ತು ಡಿಸೆಂಬರ್ 30, 2022 ರಂದು ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ.

ಧ್ವಜವನ್ನು ಮಡಿಚುವ ಸರಿಯಾದ ಕ್ರಮಗಳು :

ಹಂತ 1: ರಾಷ್ಟ್ರಧ್ವಜವನ್ನು ಅಡ್ಡಲಾಗಿ ಇರಿಸಿ.
ಹಂತ 2 : ತ್ರಿವರ್ಣ ಧ್ವಜವನ್ನು ಹಿಡಿದುಕೊಳ್ಳಿ ಮತ್ತು ಮಧ್ಯದ ಬಿಳಿ ಬಣ್ಣದ ಅಡಿಯಲ್ಲಿ ಕೇಸರಿ ಮತ್ತು ಹಸಿರು ಪಟ್ಟಿಗಳನ್ನು ಮಡಿಸಿ.
ಹಂತ 3: ಬಿಳಿ ಪಟ್ಟಿಯನ್ನು ಮಡಿಸುವಾಗ ಅಶೋಕ ಚಕ್ರವು ಕೇಸರಿ ಮತ್ತು ಹಸಿರು ಬಣ್ಣದೊಂದಿಗೆ ಗೋಚರಿಸುತ್ತದ ಎಂದು ಖಚಿತಪಡಿಸಿಕೊಳ್ಳಿ.
ಹಂತ 4: ಮೇಲಿನ ಹಂತಗಳನ್ನು ಅನುಸರಿಸಿದ ನಂತರ, ಮಡಿಸಿದ ಧ್ವಜವನ್ನು ನಿಮ್ಮ ಅಂಗೈ ಅಥವಾ ತೋಳುಗಳ ಮೇಲೆ ಹಿಡಿದುಕೊಂಡು ಹೋಗಿ ಒಳಗೆ ಸರಿಯಾದ ಜಾಗದಲ್ಲಿ ಇಡುವುದು.

Share news

Related Articles

Leave a Reply

Your email address will not be published. Required fields are marked *

Back to top button