ರಾಷ್ಟ್ರೀಯ

ಭಾರತದಲ್ಲಿ ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ 471 ರಿಂದ 72,993 ಕ್ಕೆ ಗಣನೀಯ ಏರಿಕೆ

Share news

ಸ್ಟಾರ್ಟ್ ಅಪ್ ಗಳು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ವಾವಲಂಬಿಗಳಾಗಿ ಬದುಕುವ ಹಾಗೂ ಹೊಸ ಆವಿಷ್ಕಾರಗಳೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೆಯ್ಯುವ ಪ್ರಯತ್ನವನ್ನು ಅನೇಕರು ಮಾಡುತ್ತಿದ್ದಾರೆ. ಇಂದು ಭಾರತದಲ್ಲಿ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳ ಸಂಖ್ಯೆ 2016 ರಲ್ಲಿ 471 ರಿಂದ 2022 ರಲ್ಲಿ 72,993 ಕ್ಕೆ ಗಣನೀಯವಾಗಿ ಏರಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ.

ಕೇಂದ್ರ ಸರ್ಕಾರವು 16 ಜನವರಿ 2016 ರಂದು ಸ್ಟಾರ್ಟ್ಅಪ್ ಇಂಡಿಯಾ ಎಂಬ ಉಪಕ್ರಮವನ್ನು ಪ್ರಾರಂಭಿಸಿತು, ಇದು” ಭಾರತದ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವ, ಉದ್ಯಮಶೀಲತೆಯನ್ನು ಬೆಂಬಲಿಸುವ ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸಕ್ರಿಯಗೊಳಿಸುವ ಸ್ವದೇಶಿ ನಿರ್ಮಿತ ವಸ್ತುಗಳನ್ನು, ತಂತ್ರಜ್ಞಾನವನ್ನು ಪೋಷಿಸಲು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯೊಂದಿಗೆ ಸಾಗಿ 2016 ರಲ್ಲಿ 471 ರಿಂದ 2022 ರಲ್ಲಿ 72,993 ಕ್ಕೆ ಹೆಚ್ಚಿಸಿದೆ (30 ಜೂನ್ 2022 ರಂತೆ),” ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್ ಸಚಿವ ಹೇಳಿದರು. ಇದು ದೇಶದ ಎಲ್ಲಾ ರೀತಿಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ಕೇಂದ್ರ ಸರ್ಕಾರ 4,500 ಕ್ಕೂ ಹೆಚ್ಚು ಉದಯೋನ್ಮುಖ ಟೆಕ್ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಲಾಗಿದೆ. ಇದಲ್ಲದೆ, ಡಿಪಿಐಐಟಿಯು 56 ವೈವಿಧ್ಯಮಯ ವಲಯಗಳಲ್ಲಿ ಹರಡಿರುವ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿದೆ. ಇಂಟರ್ನೆಟ್ ಆಫ್ ಥಿಂಗ್ಸ್ (IoT), ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ ಇತ್ಯಾದಿಗಳಂತಹ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ 4,500 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಲಾಗಿದೆ.

ಭಾರತದಲ್ಲಿ ಸ್ಟಾರ್ಟ್ ಅಪ್ ಗಳು ಹೆಚ್ಚುಗುತ್ತಿದ್ದು, ಕ್ರಿಯಾಶೀಲವಾಗಿ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಗಲು, ಸ್ವದೇಶಿ ನಿರ್ಮಿತ ತಂತ್ರಜ್ಞಾನ, ಆವಿಷ್ಕಾರಗಳು ಹೊಸ ಹುಟ್ಟು ಪಡೆಯಲು ಸಹಾಯಕವಾಗಲಿದೆ.


Share news

Related Articles

Leave a Reply

Your email address will not be published. Required fields are marked *

Back to top button