ರಾಷ್ಟ್ರೀಯ

ಕಂಚಿನ 9,500 ಕೆಜಿಯ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ ಪ್ರಧಾನಿ

Share news

ನವದೆಹಲಿಯಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಂಸತ್ ಭವನದ ಮೇಲ್ಚಾವಣಿಯಲ್ಲಿ 9,500 ಕೆಜಿ ತೂಕವಿರುವ, 6.5 ಮೀಟರ್ ಎತ್ತರದ, 4.4 ಅಗಲವಿರುವ ಕಂಚಿನ ರಾಷ್ಟ್ರೀಯ ಲಾಂಛನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು.

ಹೊಸ ಸಂಸತ್ ಭವನದ ಕೆಲಸವನ್ನು ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ಗೆ ವಹಿಸಲಾಗಿದ್ದು, ರಾಷ್ಟ್ರೀಯ ಲಾಂಛನ ನಿರ್ಮಿಸಲು 9 ತಿಂಗಳು ಬೇಕಾಗಿದೆ. ನೂತನ ಸಂಸತ್ ಭವನದಲ್ಲಿ 888 ಲೋಕಸಭಾ ಸದಸ್ಯರು, 384 ರಾಜ್ಯ ಸಭಾ ಸದಸ್ಯರು ಕುಳಿತುಕೊಳ್ಳಲು ಅವಕಾಶವಿದೆ ಹಾಗೂ ಉಳಿದಂತೆ ಸಭಾಂಗಣದಲ್ಲಿ 1272 ಹೆಚ್ಚುವರಿ ಆಸನಗಳ ವ್ಯವಸ್ಥೆಯು ಇದೆ.6,000 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.ಹೊಸ ಸಂಸತ್ ಭವನದ ಮೂಲಕ ಉಭಯ ಸದನಗಳ ಜಂಟಿ ಅಧಿವೇಶನ ನಡೆಸಲು ಸಾಧ್ಯವಾಗುತ್ತದೆ.


Share news

Related Articles

Leave a Reply

Your email address will not be published. Required fields are marked *

Back to top button