ರಾಷ್ಟ್ರೀಯ

ಉತ್ತರಾಖಂಡದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ಐಟಿಬಿಪಿ ಪಡೆಗಳಿಂದ ತ್ರಿವರ್ಣ ಧ್ವಜದ ಹಾರಾಟ

Share news

ಭಾರತೀಯ ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಉತ್ತರಾಖಂಡದಲ್ಲಿ 13,000 ಅಡಿ ಎತ್ತರದಲ್ಲಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಉತ್ಸಾಹಕ್ಕೆ ಇನ್ನಷ್ಟು ಬಲ ನೀಡಿದ್ದಾರೆ. ಸೈನಿಕರು ತ್ರಿವರ್ಣ ಧ್ವಜವನ್ನು ಬೀಸುತ್ತಿರುವುದು ರಾಷ್ಟ್ರದ ಪ್ರಾಥಮಿಕ ಗಡಿ ಗಸ್ತು ಏಜೆನ್ಸಿಯ ಜಾಗರೂಕತೆ ಮತ್ತು ಕಣ್ಗಾವಲಿನ ಸಾಮರ್ಥ್ಯಗಳನ್ನು ವ್ಯಾಖ್ಯಾನಿಸುತ್ತದೆ.

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಉತ್ಸಾಹವನ್ನು ಇನ್ನಷ್ಟು ಹುರುಪಿನಿಂದ ಆಚರಿಸಲು ಸೈನಿಕರು ‘ಹರ್ ಘರ್ ತಿರಂಗ’ ಅಭಿಯಾನದ ಮೂಲಕ 13,000 ಎತ್ತರದ ಪ್ರದೇಶದಲ್ಲಿ ಭಾರತದ ಧ್ವಜವನ್ನು ಹಾರಿಸಿದ ಸುಂದರ ಕ್ಷಣಗಳು ಕಣ್ತುಂಬಿ ಬರುತ್ತದೆ.

ಐಟಿಬಿಪಿ ಪಡೆಗಳು ಜುಲೈನಲ್ಲಿ ಲಡಾಖ್‌ನಲ್ಲಿ 12,000 ಅಡಿ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದರು. ಪಡೆಗಳು ಭಾರತದ ಎಲ್ಲಾ ನಾಗರಿಕರಿಗೆ ಸಂದೇಶವನ್ನು ಕಳುಹಿಸಿ ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಒತ್ತಾಯಿಸಿ, ಎಲ್ಲಾ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಸರ್ಕಾರದ ಕ್ರಮವನ್ನು ಪಾಲಿಸುವಂತೆ ಕೇಳಿಕೊಂಡಿದ್ದಾರೆ.

ಆಗಸ್ಟ್ 4 ರಂದು, ಐಟಿಬಿಪಿಯು ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಸಹಯೋಗದೊಂದಿಗೆ ಮಸ್ಸೌರಿಯ ಐಟಿಬಿಪಿ ಅಕಾಡೆಮಿಯ ನಾಗ್ ಮಂದಿರದ ಬಳಿ 72 ಅಡಿ ಎತ್ತರದ ರಾಷ್ಟ್ರೀಯ ಧ್ವಜವನ್ನು ಸ್ಥಾಪಿಸಿತು, ಐಟಿಬಿಪಿ ಮತ್ತು ಎಫ್‌ಎಫ್‌ಐ ಮೂಲಕ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿಗೆ ಧ್ವಜವನ್ನು ಅರ್ಪಿಸಲಾಯಿತು.

‘ಹರ್ ಘರ್ ತಿರಂಗ’ ಅಭಿಯಾನದ ಪ್ರಾರಂಭವಾಗಿ ಐಟಿಬಿಪಿ ಪಡೆಗಳು ರಾಷ್ಟ್ರಧ್ವಜ ಹಾರಿಸಿ ಗೌರವ ಸಲ್ಲಿಸಿದದ್ದು, ನಾವು ಕೂಡ ಮನೆ ಮನೆಗಳಲ್ಲಿ ಧ್ವಜವನ್ನು ಪ್ರದರ್ಶಿಸಿ ಗೌರವ ಸಲ್ಲಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡೋಣ. ದೇಶ ಭಕ್ತಿಯು ಎಲ್ಲೇಡೆ ಜಾಗೃತವಾಗಲಿ.


Share news

Related Articles

Leave a Reply

Your email address will not be published. Required fields are marked *

Back to top button