ರಾಷ್ಟ್ರೀಯ
Trending

ಭಾರತೀಯ ರೈಲ್ವೆಯಿಂದ ವಂದೇ ಮೆಟ್ರೋ ಶೀಘ್ರದಲ್ಲೇ ಪ್ರಾರಂಭ

Share news

ಭಾರತೀಯ ರೈಲ್ವೆ ಇಲಾಖೆಯು ವಿವಿಧ ಕೆಲಸಗಳಿಗಾಗಿ ನಗರಗಳಿಗೆ ಬರುವ ಜನರಿಗಾಗಿ ‘ವಂದೇ ಮೆಟ್ರೋ’ ಆರಂಭಿಸಲು ನಿರ್ಧರಿಸಲಾಗಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ರೀತಿ ‘ವಂದೇ ಮೆಟ್ರೊ’ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ವಂದೇ ಮೆಟ್ರೋ ರೈಲುಗಳು ನೌಕರರು, ವ್ಯಾಪಾರಿಗಳು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಹಾಗೂ `ವಂದೇ ಮೆಟ್ರೋ’ ಕೂಡ ಲಭ್ಯವಿದೆ ದೊಡ್ಡ ನಗರಗಳಿಂದ 50-60 ಕಿಮೀ ದೂರದಲ್ಲಿರುವ ಜನರು ವಿವಿಧ ರೀತಿಯ ಕೆಲಸಗಳಿಗಾಗಿ ನಗರಕ್ಕೆ ಹಿಂತಿರುಗಲು ಸಾಧ್ಯವಾಗುವಂತೆ ವಂದೇ ಭಾರತ್ ಮೆಟ್ರೋವನ್ನು ತರಲು ಪ್ರಧಾನಿ ನಿರ್ಧರಿಸಿದ್ದಾರೆ.

ವಂದೇ ಮೆಟ್ರೋದ ವಿನ್ಯಾಸ ಮತ್ತು ನಿರ್ಮಾಣ ಈ ವರ್ಷ ಪೂರ್ಣಗೊಳ್ಳಲಿದೆ. ಭಾರತದಲ್ಲಿ ತಯಾರಾದ ಮೊದಲ ‘ಹೈಡೋಜನ್ ರೈಲು’ ಡಿಸೆಂಬರ್ 2023 ರ ವೇಳೆಗೆ ಲಭ್ಯವಾಗಲಿದೆ .ಈ ಬಾರಿ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2023-24 ರ ಹಣಕಾಸು ವರ್ಷಕ್ಕೆ ರೈಲ್ವೆಗೆ ರೂ.2.42 ಲಕ್ಷ ಕೋಟಿಗಳನ್ನು ನಿಗದಿಪಡಿಸುವುದಾಗಿ ಘೋಷಿಸಿದ್ದಾರೆ. ವಂದೇ ಮೆಟ್ರೋ ಅತ್ಯಂತ ಪರಿಣಾಮಕಾರಿಯಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.


Share news

Related Articles

Leave a Reply

Your email address will not be published. Required fields are marked *

Back to top button