ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿ ವತಿಯಿಂದ ಆಯೋಜಿಸಲಾಗಿರುವ 58ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಧಾರ್ಮಿಕ ಭಾಷಣ ಕಾರ್ಯಕ್ರಮವು ಸೋಮವಾರ, ಸೆಪ್ಟೆಂಬರ್ 9, 2024 ಸಂಜೆ 6 ಕ್ಕೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಳವಾರಿನ ಮಹಾವೀರ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ. ಸಚಿನ್ ಹಾರಕರೆ ವಹಿಸಲಿದ್ದಾರೆ. ಭಾರತೀಯ ವಾಯುಸೇನೆಯ ಪ್ಯಾರಚೂಟ್ ಸ್ಕೈಡೈವಿಂಗ್ ನಿವೃತ್ತ ತರಬೇತುದಾರ ರಾಮಚಂದ್ರ ಪುಚ್ಚೇರಿ, ಯುವ ಪ್ರಗತಿಪರ ಕೃಷಿಕ ಮನೋಜ್ ಶೆಣೈ ಆರ್ಯಮುಗೇರಿ ಉಪಸ್ಥಿತರಿರಲಿದ್ದಾರೆ.