Othersರಾಜ್ಯ

ಖಾಸಗಿ ವೈದ್ಯಕೀಯ ಕಾಲೇಜುಗಳ ಖಾಸಗಿ ಕೋಟಾದ ಸೀಟುಗಳ ಶುಲ್ಕ ಶೇ.10ರಷ್ಟು ಏರಿಕೆ | ಶುಲ್ಕ ವಿವರ ಇಲ್ಲಿದೆ…

Share news

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪಡೆಯುವ ಸರ್ಕಾರಿ ಮತ್ತು ಖಾಸಗಿ ಎಂಬಿಬಿಎಸ್‌ ಸೀಟುಗಳ ಶುಲ್ಕದಲ್ಲಿ ಪ್ರಸಕ್ತ ವರ್ಷದಲ್ಲಿ ಯಥಾಸ್ಥಿತಿ (ಕಳೆದ ವರ್ಷದ ಶುಲ್ಕದಷ್ಟು) ಇರಲಿದೆ. ಆದರೆ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಕಳೆದ ವರ್ಷಕ್ಕಿಂತ ಶೇ.10ರಷ್ಟು ಏರಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

BHARATHAVANI NEWS

ಚಹಾ ವ್ಯಾಪಾರಿಯ ಮಗಳು ಇಂದು ಭಾರತೀಯ ವಾಯುಸೇನೆಯಲ್ಲಿ ಪೈಲಟ್

ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್‌ ಸೀಟ್‌ಗೆ 50 ಸಾವಿರ ರೂ ಮತ್ತು ದಂತ ವೈದ್ಯಕೀಯ ಸೀಟ್‌ಗೆ 40 ಸಾವಿರ ರೂ. ನಿಗದಿಪಡಿಸಲಾಗಿದೆ. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಂಘದಲ್ಲಿ ನೋಂದಾಯಿಸಲ್ಪಟ್ಟಿರುವ ಎಂಬಿಬಿಎಸ್‌ ಕಾಲೇಜುಗಳ ಸರ್ಕಾರಿ ಕೋಟಾದ ಅಭ್ಯರ್ಥಿಗಳ ಶುಲ್ಕ 1,28,746 ರೂ. ಮತ್ತು ಬಿಡಿಎಸ್‌ ಶುಲ್ಕ 83,358 ರೂ.ಗೆ ನಿಗದಿಪಡಿಸಲಾಗಿದೆ.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

ಖಾಸಗಿ ವೈದ್ಯಕೀಯ ಕಾಲೇಜಿನ ಖಾಸಗಿ ಎಂಬಿಬಿಎಸ್‌ ಸೀಟ್‌ನ ಶುಲ್ಕ ಕಳೆದ ವರ್ಷ 9,81,956 ರೂ.ಗಳಿದ್ದರೆ, ಈ ವರ್ಷ 10,80,152 ರೂ.ಗಳಿಗೆ ಏರಿಕೆ ಕಂಡಿದೆ. ಬಿಡಿಎಸ್‌ ಕೋರ್ಸ್‌ನ ಖಾಸಗಿ ವಿದ್ಯಾರ್ಥಿಯ ಶುಲ್ಕ 6,66,023 ರೂ.ಗಳಿದ್ದದ್ದು ಈ ವರ್ಷ 7,32,625ರೂ.ಗೆ ಏರಿಸಲಾಗಿದೆ. ಈ ಶುಲ್ಕಗಳೇ ಖಾಸಗಿ ಮತ್ತು ಡೀಮ್ಡ್ ವಿವಿಯ ಸರ್ಕಾರಿ ಕೋಟಾದ ಸೀಟುಗಳಿಗೂ ಅನ್ವಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ತಿಳಿಸಿದೆ.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?


Share news

Related Articles

Leave a Reply

Your email address will not be published. Required fields are marked *

Back to top button