Others

ನಾನೊಬ್ಬ ಹೆಮ್ಮೆಯ ಹಿಂದೂ : ಬ್ರಿಟನ್ ಪ್ರಧಾನಿ ರಿಷಿ ಸುನಕ್

Share news

ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಿಂದೂ ಮೂಲದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

“ನಾನು ಒಬ್ಬ ಹೆಮ್ಮೆಯ ಹಿಂದೂ. ನನ್ನನ್ನು ಬೆಳೆಸಿದ್ದು ಕೂಡ ಹಾಗೆಯೇ. ನಾನು ಹಾಗೆ ಇದ್ದೇನೆ ಕೂಡ. ಮುಂದಿನ ಒಂದೆರಡು ದಿನಗಳಲ್ಲಿ ನಾನು ಇಲ್ಲಿ ಇರುವಾಗ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗಬಹುದು ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.

ತಮ್ಮ ಜೀವನದ ಮೇಲೆ ನಂಬಿಕೆ ಹೊಂದಿರುವ, ಮುಖ್ಯವಾಗಿ ನಾನು ಮಾಡುವಂತಹ ಒತ್ತಡದಾಯಕ ಕೆಲಸಗಳನ್ನು ನೀವು ಹೊಂದಿರುವಾಗ ಪ್ರತಿನಿತ್ಯವೂ ನಿಮಗೆ ಸಹಾಯ ಮಾಡುವುದು ಈ ನಂಬಿಕೆ. ನಂಬಿಕೆ ಹೊಂದುವುದು ನಿಮ್ಮಲ್ಲಿ ಸ್ಥಿರತೆ ನೀಡುತ್ತದೆ, ಶಕ್ತಿ ತುಂಬುತ್ತದೆ. ಇದು ಬಹಳ ಮುಖ್ಯ” ಎಂದು ರಿಷಿ ಸುನಕ್ ತಿಳಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button