Others

KSET 2023: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ ?

Share news

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಕೆಸೆಟ್‌ ಪರೀಕ್ಷೆಗೆ ಅಧಿಸೂಚಿಸಿ, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿತ್ತು. ಕೆಇಎ ಅಧಿಸೂಚನೆ ಪ್ರಕಾರ ಕೆಸೆಟ್‌ ಅರ್ಜಿಗೆ ಸೆಪ್ಟೆಂಬರ್ 30 ಕೊನೆ ದಿನವಾಗಿದೆ.

KSET ಪರೀಕ್ಷೆಗೆ ಅರ್ಜಿ ಹಾಕುವುದು ಹೇಗೆ ?

– ಕೆಇಎ ಕೆಸೆಟ್‌ ಅರ್ಜಿ ಹಾಕುವ https://karnemakaone.kar.nic.in/pqrs/ApplicationForm_JA_org.aspxಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ನೀಡಿ.
– ಸಬ್‌ಮಿಟ್‌ ಮಾಡುವ ಮುನ್ನ ನೀಡಿದ ಮಾಹಿತಿಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.
– ನಂತರ ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
– ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್‌ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-09-2023

ಇ-ಅಂಚೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ : 03-10-2023

ಅರ್ಹತೆ

ಕೆಸೆಟ್‌ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ. ಆದರೆ ಸ್ನಾತಕೋತ್ತರ ಪದವಿ ಪಾಸ್‌ ಮಾಡಿರುವುದು ಕಡ್ಡಾಯ. ಕೆಸೆಟ್‌ ಪರೀಕ್ಷೆಯಲ್ಲಿ ತಪ್ಪಾದ ಉತ್ತರಗಳಿಗೆ ಯಾವುದೇ ರೀತಿಯಲ್ಲಿ ಋಣಾತ್ಮಕ ಮೌಲ್ಯಮಾಪನವಿರುವುದಿಲ್ಲ. ಸಾಮಾನ್ಯ ಪತ್ರಿಕೆ ಹಾಗೂ 41 ವಿಷಯಗಳ ಪಠ್ಯಕ್ರಮವನ್ನು ಕೆಇಎ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪರೀಕ್ಷಾ ಶುಲ್ಕ : Rs.1000.
ಪ್ರವರ್ಗ-I, ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ವಿಶೇಷ ಚೇತನರಿಗೆ ಶುಲ್ಕ : Rs.700.

KSET ಪಾಸ್‌ ಮಾಡಲು ಪಡೆಯಬೇಕಾದ ಕನಿಷ್ಠ ಅಂಕಗಳು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ಶೇಕಡ.40 ಅಂಕಗಳನ್ನು ಗಳಿಸಬೇಕು. ಎಸ್‌ಸಿ / ಎಸ್‌ಟಿ / ಪ್ರವರ್ಗ-1 / ಇತರೆ ಹಿಂದುಳಿದ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡ.35 ಅಂಕಗಳನ್ನು ಗಳಿಸಬೇಕು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-09-2023

ಕೆಇಎ’ಯು 2023ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು 26 ನವೆಂಬರ್ 2023 ರಂದು (ಭಾನುವಾರ) ನಡೆಸಲು ದಿನಾಂಕ ನಿಗಧಿಪಡಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button