Othersರಾಷ್ಟ್ರೀಯ

ಜಗತ್ತಿನ 50 ಅತ್ಯುತ್ತಮ ಸ್ಟ್ರೀಟ್ ಫುಡ್ ಸ್ವೀಟ್ಸ್ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದುಕೊಂಡ ಮೈಸೂರು ಪಾಕ್ | ಮೈಸೂರು ಪಾಕ್ ಹುಟ್ಟಿದ್ದು ಹೇಗೆ ?

Share news

ಟೇಸ್ಟ್ ಅಟ್ಲಾಸ್ ಪ್ರಕಟಿಸಿರುವ ವಿಶ್ವದ ಟಾಪ್ 50 ಬೀದಿಬದಿ ಸಿಹಿ ತಿನಿಸುಗಳ ಪೈಕಿ ಮೈಸೂರ್ ಪಾಕ್‌ಗೆ 14ನೇ ಸ್ಥಾನ ಪಡೆದುಕೊಂಡಿದೆ. ಕರುನಾಡಿಗೆ ಗರಿಮೆ ಹಾಗೂ ಹೆಮ್ಮೆ ಮೂಡಿಸಿದೆ. 4.4 ರೇಟಿಂಗ್‌ನೊಂದಿಗೆ ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರ್ ಪಾಕ್‌ಗೆ 14ನೇ ಸ್ಥಾನ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್‌ನೊಂದಿಗೆ 18ನೇ ಸ್ಥಾನ ಹಾಗೂ ಕುಲ್ಫಿ ಲೂದಾಗೆ 4.1 ರೇಟಿಂಗ್‌ನೊಂದಿಗೆ 32ನೇ ಸ್ಥಾನ ದೊರೆತಿದೆ.

ಮೈಸೂರು ಪಾಕ್ ಹುಟ್ಟಿದ್ದು ಹೇಗೆ ?

90 ವರ್ಷಗಳ ಹಿಂದೆ ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು. ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು.

ಕೃಷಿ ಇಲಾಖೆಯಿಂದ ‘ಕೃಷಿ ಪಂಡಿತ’ ಪ್ರಶಸ್ತಿಗೆ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು. ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು ‘ಕಾಕಾಸುರ ಮಾದಪ್ಪ’ ಮುಂದಾದರು.

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?

ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು. ಆದರೆ, ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ ‘ನಳಪಾಕ’ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. ಅವತ್ತಿನಿಂದಲೇ ಆ ತಿಂಡಿಯನ್ನು ಮೈಸೂರು ಪಾಕ ಎಂದು ಕರೆಯಲಾಯಿತು. ಮುಂದೆ ಅದು ಮೈಸೂರ್‍ಪಾಕ್ ಆಗಿ ಮೈಸೂರಿನ ಖ್ಯಾತಿಯನ್ನು ವಿಶ್ವಕ್ಕೆ ಸಾರಿತು.

ಕಾಕಾಸುರ ಮಾದಪ್ಪ ಅವರು ಸೃಷ್ಟಿ ಮಾಡಿದ ಮೈಸೂರು ಪಾಕ್ ಗೆ ಜಾಗತಿಕ ಮಟ್ಟದಲ್ಲಿ 50 ಸಿಹಿ ತಿನಿಸಿನಲ್ಲಿ 14ನೇ ಸ್ಥಾನ ಸಿಕ್ಕಿರುವುದು ಖುಷಿಯ ವಿಚಾರ.

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ಒಟ್ಟು 71 ಹುದ್ದೆಗಳಿಗೆ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ…


Share news

Related Articles

Leave a Reply

Your email address will not be published. Required fields are marked *

Back to top button