Others

ಸೆ. 26ರಂದು ಬೆಂಗಳೂರು ಬಂದ್, ಸೆ. 29ರಂದು ಕರ್ನಾಟಕ ಬಂದ್ ಆಚರಿಸಲು ವಿವಿಧ ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ

Share news

 ಕಾವೇರಿ ನದಿ ನೀರು ಸಮಸ್ಯೆ ಉಲ್ಪಣವಾಗಿರುವ ಹಿನ್ನೆಲೆಯಲ್ಲಿ ಸೆ. 29ರಂದು ರಾಜ್ಯವ್ಯಾಪಿ ಬಂದ್ ಆಚರಿಸಲು ವಿವಿಧ ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ. ಸೆ. 25ರಂದು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು , ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಸಭೆ ಸೇರಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಬಂದ್ ಅನ್ನು ಎಂದು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.

ಸೆ. 26ರಂದು ಬೆಂಗಳೂರು ಬಂದ್ ಇರುವ ಕಾರಣಕ್ಕೆ ಸೆ. 29ರಂದು ಕರ್ನಾಟಕ ಬಂದ್ ಆಚರಿಸುವ ಪ್ರಸ್ತಾವನೆಗೆ ಹಾಗೂ ಒಂದು ಬಂದ್ ನಂತರ ಮತ್ತೊಂದು ಬಂದ್ ಗೆ ನಡುವೆ 2 ದಿನಗಳ ಅಂತರವಿರಲಿ ಎಂಬ ಸಲಹೆಗೆ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಇದಾದ ನಂತರ, ಮಾತನಾಡಿದ ವಾಟಾಳ್ ನಾಗರಾಜ್ ಅವರು, ಸೆ. 29ರಂದು ಕರ್ನಾಟಕ ಬಂದ್ ನಡೆಸಲು ಉದ್ದೇಶಿಸಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದರು. ಎಲ್ಲಾ ಸಂಘಟನೆಗಳು, ಜನಸಾಮಾನ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದರು.


Share news

Related Articles

Leave a Reply

Your email address will not be published. Required fields are marked *

Back to top button