Others

ಛತ್ರಪತಿ ಶಿವಾಜಿ ಬಳಸುತ್ತಿದ್ದ ‘ವ್ಯಾಘ್ರ ನಖ’ ಆಯುಧ ಬ್ರಿಟನ್‌ನಿಂದ ಭಾರತಕ್ಕೆ ವಾಪಸ್

Share news

‘ವ್ಯಾಘ್ರ ನಖ’ ಡ್ಯಾಗರ್ ಅನ್ನು ಬ್ರಿಟನ್‌ನಿಂದ ಶೀಘ್ರವೇ ಭಾರತಕ್ಕೆ ವಾಪಸ್ ತರಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅವರು 1659ರಲ್ಲಿ ಬಿಜಾಪುರ ಸುಲ್ತಾನನ ಸೇನಾಧಿಪತಿ ಅಫ್ಜಲ್‌ ಖಾನ್‌ನನ್ನು ಇದೇ ಆಯುಧ ಬಳಸಿ ಹತ್ಯೆ ಮಾಡಿದ್ದರು ಎಂದು ಹೇಳಲಾಗಿದೆ. ಈ ಸಾಂಪ್ರದಾಯಿಕ ಹಾಗೂ ಚಾರಿತ್ರ್ಯಿಕ ಮಹತ್ವ ಹೊಂದಿರುವ ಆಯುಧವು ಪ್ರಸ್ತುತ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿದೆ.

ಮಹಾರಾಜರ ವಂಶಸ್ಥರ ಸ್ವಾಧೀನದಲ್ಲಿ ಇದ್ದ ಈ ವಿಶಿಷ್ಟ ಆಯುಧವನ್ನು ಈಸ್ಟ್ ಇಂಡಿಯಾ ಕಂಪೆನಿ ಅಧಿಕಾರಿ ಜೇಮ್ಸ್ ಗ್ರಾಂಟ್ ಡಫ್ ಎಂಬಾತನಿಗೆ ನೀಡಲಾಗಿತ್ತು. ಭಾರತದಲ್ಲಿನ ತನ್ನ ಅಧಿಕಾರ ಅವಧಿ ಮುಗಿದ ಬಳಿಕ ಡಫ್, ವ್ಯಾಘ್ರ ನಖವನ್ನು ಬ್ರಿಟನ್‌ಗೆ ಕೊಂಡೊಯ್ದಿದ್ದ. ಡಫ್‌ನ ವಂಶಸ್ಥರು ಅದನ್ನು ಮ್ಯೂಸಿಯಂಗೆ ದಾನವಾಗಿ ನೀಡಿದ್ದರು.

ಸತಾರಾ ಕೋರ್ಟ್‌ನಲ್ಲಿ ಶಿವಾಜಿ ಮಹಾರಾಷ್ಟ್ರದ ಸಂಸ್ಕೃತಿ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವರ್ ಅವರು, ಶಿವಾಜಿ ಮಹಾರಾಜ್ ಬಳಸುತ್ತಿದ್ದ ಈ ಐತಿಹಾಸಿಕ ವ್ಯಾಘ್ರ ನಖ ಆಯುಧವನ್ನು ಮರಳಿ ಭಾರತಕ್ಕೆ ತರಲು ಶ್ರಮಿಸಿದ್ದಾರೆ. ಈ ಸಂಬಂಧ ಅವರು ವಿಕ್ಟೋರಿಯಾ ಆಂಡ್ ಆಲ್ಬರ್ಟ್ ಮ್ಯೂಸಿಯಂ ಜತೆ ಒಪ್ಪಂದವೊಂದಕ್ಕೆ (ಎಂಒಯು) ಸಹಿ ಹಾಕಲಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button