Others

2023ನೇ ಸಾಲಿನ ಸೈಮಾ ಪ್ರಶಸ್ತಿ ಕನ್ನಡಿಗರು ಯಾರೆಲ್ಲಾ ಪಡೆದಿದ್ದಾರೆ ?

Share news

2023ನೇ ಸಾಲಿನ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಕಳೆದ ರಾತ್ರಿ (SIIMA Awards 2023) ನಡೆಯಿತು.ಈ ಬಾರಿ ಕನ್ನಡದಲ್ಲಿ ಯಾರಿಗೆಲ್ಲ ಪ್ರಶಸ್ತಿ ಒಲಿದಿದೆ ಇಲ್ಲಿದೆ ಮಾಹಿತಿ…

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ ಅವಾರ್ಡ್ ಪಡೆದಿದ್ದಾರೆ.

ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾಗೆ ‘ಅತ್ತುತ್ತಮ ಚಿತ್ರ’ ಪ್ರಶಸ್ತಿ

ಕಾಂತಾರ ಸಿನಿಮಾದಲ್ಲಿ ನಟಿಸಿದ ಅಚ್ಯುತ್ ಕುಮಾರ್ ಅವರು ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಪಡೆದಿದ್ದಾರೆ.

‘ಗಾಳಿಪಟ 2’ ಸಿನಿಮಾದಲ್ಲಿನ ನಟನೆಗೆ ದಿಗಂತ್ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ಡೊಳ್ಳು’ ಚಿತ್ರದ ಡೈರೆಕ್ಟರ್ ಸಾಗರ್ ಪುರಾಣಿಕ್ ಅವರು ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಚೊಚ್ಚಲ ನಿರ್ಮಾಪಕ ಪ್ರಶಸ್ತಿಯನ್ನು ಪವನ್ ಒಡೆಯರ್ ಅವರು ಸ್ವೀಕರಿಸಿದರು.

ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸ್ವೀಕರಿಸಿದ ನಟಿ ಶುಭಾ ರಕ್ಷ

ಪದವಿ ಪೂರ್ವ ಚಿತ್ರದಲ್ಲಿನ ಅಭಿನಯಕ್ಕೆ ಪೃಥ್ವಿ ಶಾಮನೂರ್ ಭರವಸೆಯ ನಟ ಪ್ರಶಸ್ತಿ ಪಡೆದರು

ವಿಕ್ರಾಂತ್ ರೋಣ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಪಡೆದ ನೀತಾ ಅಶೋಕ್

ಕಾಂತಾರ ಚಿತ್ರದಲ್ಲಿ ವಿಶೇಷ ಕೊಡುಗೆಗಾಗಿ ವಿಶೇಷ ಶ್ಲಾಘನೆ ಪ್ರಶಸ್ತಿ ಸ್ವೀಕರಿಸಿದ ಮುಕೇಶ್ ಲಕ್ಷ್ಮಣ್

ಹೀಗೆ ಕನ್ನಡ ಚಿತ್ರರಂಗದ ಹಲವು ನಟ ಹಾಗೂ ನಟಿಯರು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ


Share news

Related Articles

Leave a Reply

Your email address will not be published. Required fields are marked *

Back to top button