ಭಾರತದ ರಾಷ್ಟ್ರಪತಿ ದ್ರೌಪದಿ ತುರ್ತು ಅವರು ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಂಪಾನಿಯನ್ ಆಫ್ ಆರ್ಡರ್ ಆಫ್ ಫಿಜಿ ಗೆ ಭಾಜನರಾಗಿದ್ದಾರೆ. ಈ ಬಗ್ಗೆ ರಾಷ್ಟ್ರಪತಿ ಕಚೇರಿ ಟ್ವೀಟ್ ಮಾಡಿದ್ದು ‘ಫಿಜಿ ಅಧ್ಯಕ್ಷ ರತು ವಿಲಿಯಮ್ ಮೈವಲಿಲಿ ಕಟೋನಿವೆರೆ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಂಪಾನಿಯನ್ ಆಫ್ ಆರ್ಡರ್ ಆಫ್ ಫಿಜಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದು ಫಿಜಿಯ ಅತ್ಯುನ್ನತ ಗೌರವವಾಗಿದೆ’ ಎಂದು ಬರೆದುಕೊಂಡಿದೆ. ರಾಷ್ಟ್ರಪತಿಯವರು ಎರಡು ದಿನಗಳ ಫಿಜಿ ಪ್ರವಾಸದಲ್ಲಿದ್ದು ಈ ಗೌರವವನ್ನು ಸ್ವೀಕರಿಸಿದ್ದಾರೆ. ಇದು ಭಾರತಕ್ಕೆ ಸಂದ ಬಹು ದೊಡ್ಡ ಗೌರವವಾಗಿದೆ.