Schemes

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?

Share news

ಭಾರತೀಯ ರೈಲ್ವೆ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ ರೂಪಿಸಲಾದ ‘ಕರ್ನಾಟಕ ಭಾರತ್‌ ಗೌರವ ಕಾಶಿ ದರ್ಶನ’ ಯಾತ್ರೆಗೆ ರಾಜ್ಯ ಸರ್ಕಾರವು ಪ್ರತಿ ಯಾತ್ರಿಗೆ 5 ಸಾವಿರ ರೂಪಾಯಿ ರಿಯಾಯಿತಿ ನೀಡಲಿದೆ. ಮುಂದಿನ ಯಾತ್ರೆ ಜು.29ಕ್ಕೆ ಆರಂಭವಾಗಲಿದೆ. ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ ಪುಣ್ಯ ಕ್ಷೇತ್ರಗಳಿಗೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಲಾಗಿದೆ.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ |  ಇಲ್ಲಿದೆ ಮಾಹಿತಿ..

ವಿಶೇಷ ರೈಲಿನ ಪ್ರವಾಸ ಇದಾಗಿದ್ದು, ಪ್ರತಿ ಯಾತ್ರಾರ್ಥಿಗೆ 20 ಸಾವಿರ ರೂಪಾಯಿ ಪ್ಯಾಕೇಜ್ ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ತಲಾ 5 ಸಾವಿರ ರು. ರಾಜ್ಯ ಸರ್ಕಾರದ ವತಿಯಿಂದ ಭರಿಸಲಾಗುತ್ತದೆ. ಉಳಿದ 15 ಸಾವಿರ ರೂಪಾಯಿ ಮೊತ್ತವನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಾಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆಯ ವ್ಯವಸ್ಥೆ ಮಾಡಲಾಗುತ್ತದೆ. ಇದು ಒಟ್ಟು1 ದಿನಗಳ ಪ್ರವಾಸವಾಗಿರುತ್ತದೆ.

ಈ ಯೋಜನೆಯಡಿ ಈವರೆಗೆ ಒಟ್ಟು 3 ಟ್ರಿಪ್ ಪೂರೈಸಿದ್ದು, 1,644 ಯಾತ್ರಾರ್ಥಿಗಳು ಯಾತ್ರೆಗೆ ಹೋಗಿ ಬಂದಿದ್ದಾರೆ. ರಾಜ್ಯ ಸರ್ಕಾರ ತಲಾ 5 ಸಾವಿರ ರೂಪಾಯಿ. ನಂತೆ 82.20 ಲಕ್ಷ ರೂಪಾಯಿ. ಸಹಾಯಧನ ನೀಡಿದೆ.

NCC ವಿದ್ಯಾರ್ಥಿಗಳಿಗೆ ಭಾರತದ ಮಿಲಿಟರಿ ಪಡೆಯಲ್ಲಿ ಉದ್ಯೋಗ ಅವಕಾಶ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

ಇದೇ ಜುಲೈ 29ರಂದು ಬೆಂಗಳೂರಿನಿಂದ ವಿಶೇಷ ರೈಲು ಹೊರಡಲಿದ್ದು, ಯಾತ್ರೆಗೆ ತೆರಳುವ ಆಸಕ್ತಿ ಇರುವ ಯಾತ್ರಾರ್ಥಿಗಳು ಐಆರ್‌ಸಿಟಿಸಿ ಪೋರ್ಟಲ್ ಮೂಲಕ ತಮ್ಮ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಕಾಶಿ ಯಾತ್ರಾ ಯೋಜನೆಯ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಬಹುದಾದ ಎರಡು ಅಧಿಕೃತ ವೆಬ್‌ಸೈಟ್‌ಗಳಿವೆ :

  • ಅಧಿಕೃತ ವೆಬ್‌ಸೈಟ್ ಹೆಸರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ “itms.kar.nic.in
  • ಅಧಿಕೃತ ವೆಬ್‌ಸೈಟ್ ಹೆಸರು: ಸೇವಾ ಸಿಂಧು “evasindhuservices.karnataka.gov.in

ಈ ಸರ್ಕಾರದ ಯೋಜನೆಯು ಕರ್ನಾಟಕದಿಂದ ಯುಪಿ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಪ್ರಯಾಣಿಸುವ ಸುಮಾರು 30,000 ಯಾತ್ರಾರ್ಥಿಗಳಿಗೆ 5000 ರೂಪಾಯಿಗಳ ಆರ್ಥಿಕ ಸಹಾಯಧನವನ್ನು ನೀಡುತ್ತದೆ.ಯಾ


Share news

Related Articles

Leave a Reply

Your email address will not be published. Required fields are marked *

Back to top button