Schemes

ಪಿ.ಎಂ ವಿಶ್ವಕರ್ಮ ಯೋಜನೆಗೆ ಒಪ್ಪಿಗೆ | ಶೇ 5ರ ಬಡ್ಡಿ ದರದಲ್ಲಿ 1 ಲಕ್ಷದ ವರಗೆ ಸುಲಭ ಸಾಲ ಸೌಲಭ್ಯ | ಇಲ್ಲಿದೆ ಮಾಹಿತಿ…

Share news

ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ‘ಪಿಎಂ ವಿಶ್ವಕರ್ಮ’ ಯೋಜನೆಗೆ ಒಪ್ಪಿಗೆ ನೀಡಿದೆ. ಶೇ 5ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿದೆ.

ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಭಾಷಣದಲ್ಲಿ ನರೇಂದ್ರ ಮೋದಿ, “ವಿಶ್ವಕರ್ಮ ಜಯಂತಿಯಂದು ಈ ಯೋಜನೆಯನ್ನು ನಾವು ಘೋಷಣೆ ಮಾಡಲಿದ್ದೇವೆ. ಈ ಯೋಜನೆ ಕೌಶಲಯುಕ್ತ, ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮುಖ್ಯವಾಗಿ ಇತರೆ ಹಿಂದುಳಿದ ವರ್ಗಗಳ ಸಮುದಾಯದವರಿಗೆ ನೆರವಾಗಲಿದೆ” ಎಂದು ಹೇಳಿದ್ದರು.

ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳಿಗಾಗಿ “ದೀನ್ ದಯಾಳ್ ಸ್ಪರ್ಶ ಯೋಜನೆ” | ಏನಿದು ಯೋಜನೆ ?

ಪಿಎಂ ವಿಶ್ವಕರ್ಮ ಯೋಜನೆ 2024ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಕೇಂದ್ರ ಸರ್ಕಾರ ‘ಪಿಎಂ ವಿಶ್ವಕರ್ಮ ಯೋಜನೆ’ ಘೋಷಣೆ ಮಾಡಿದೆ. ಈ ಯೋಜನೆಯಿಂದ ಸುಮಾರು 30 ಲಕ್ಷ ಕರಕುಶಲ ಕರ್ಮಿಗಳು ಮತ್ತು ಅವರ ಕುಟುಂಬದವರಿಗೆ ಸಹಾಯಕವಾಗಲಿದೆ. ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುವ ಯೋಜನೆ ಇದಾಗಿದೆ.

BHARATHAVANI NEWS

ಯೋಜನೆಗಾಗಿಯೇ 2028ರ ತನಕ 13,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ 18 ಸಾಂಪ್ರದಾಯಿಕ ಕರಕುಶಲ ಕರ್ಮಿಗಳು ಯೋಜನೆಯಡಿ ಸಾಲ ಸೌಲಭ್ಯವನ್ನು ಪಡೆಯಲಿದ್ದಾರೆ.

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?

ಯೋಜನೆಯ ಬಗ್ಗೆ ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್, “ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕಲಾವಿದರು, ಕುಶಲಕರ್ಮಿಗಳನ್ನು ಗುರುತಿಸಿ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಗುರುತಿನ ಚೀಟಿಯನ್ನು ಸಹ ನೀಡಲಾಗುತ್ತದೆ. ಮೊದಲ ಹಂತದಲ್ಲಿ 1 ಲಕ್ಷದವರೆಗೆ ಸಾಲ ರಿಯಾಯಿತಿ ಬಡ್ಡಿದರದ ಮೂಲಕ ಶೇ 5ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ” ಎಂದರು.

BHARATHAVANI NEWS

“ಈ ಯೋಜನೆ ಕೇವಲ ಸಾಲ ಸೌಲಭ್ಯ ನೀಡುವುದು ಮಾತ್ರವಲ್ಲ. ಅವರ ಕೌಶಲ್ಯದ ಉನ್ನತೀಕರಣ, ತಯಾರಿಕೆಗಳಿಗೆ ಪ್ರೋತ್ಸಾಹ, ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ಮತ್ತು ಉತ್ಪನ್ನಗಳ ಮಾರುಕಟ್ಟೆಗಳಿಗೆ ಬೆಂಬಲವನ್ನು ಸಹ ನೀಡುತ್ತದೆ” ಎಂದು ಸಚಿವರು ವಿವರಣೆ ನೀಡಿದರು.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

ಪಿಎಂ ವಿಶ್ವಕರ್ಮ ಯೋಜನೆಯಡಿ ಮೊದಲ ಹಂತದಲ್ಲಿ ಬಡಗಿಗಳು, ದೋಣಿ ತಯಾರಕರು, ಅಕ್ಕಸಾಲಿಗರು, ಕಮ್ಮಾರರು, ಬೀಗ ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಚಮ್ಮಾರರು ಮತ್ತು ಮೇಸ್ತ್ರಿಗಳು ಬರುತ್ತಾರೆ. ಪಿಎಂ ವಿಶ್ವಕರ್ಮ ಯೋಜನೆಯಡಿ ನೇಯ್ಗೆದಾರರು, ಅಕ್ಕಸಾಲಿಗರು, ಕುಂಬಾರರು, ಅಗಸರು, ಕ್ಷೌರಿಕರು ಹಾಗೂ ಇಂತಹ ವಿವಿಧ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣ ಮಾಡಲಿದ್ದೇವೆ. ಸೆಪ್ಟೆಂಬರ್ 17ರಂದು ಈ ಯೋಜನೆಯನ್ನು ಘೋಷಣೆ ಮಾಡಲಿರುವುದು ಎಂದು ಪ್ರಧಾನಿ ಹೇಳಿದರು.

ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..


Share news

Related Articles

Leave a Reply

Your email address will not be published. Required fields are marked *

Back to top button