Schemes

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ…

Share news

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ಯೋಜನೆಗಳನ್ನು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ದೆಹಲಿ ಅನುಷ್ಠಾನಗೊಳಿಸುತ್ತದೆ. ಈ ಹಿನ್ನಲೆಯಲ್ಲಿ ಸಂಸ್ಕೃತಕ್ಕೆ ಉತ್ತೇಜನ ನೀಡುವ ಯೋಜನೆಗಳಡಿ 2023-24ನೇ ಸಾಲಿಗೆ ಆರ್ಥಿಕ ಸಹಾಯ ಒದಗಿಸಲು ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು ?

ಶಿಷ್ಯವೇತನಕ್ಕೆ 9ನೇ ತರಗತಿಯಿಂದ ಪಿಹೆಚ್‌ಡಿ ಮಟ್ಟದವರೆಗೆ ಸಾಂಪ್ರದಾಯಿಕ / ಆಧುನಿಕ ಮಾದರಿಯಲ್ಲಿ ಸಂಸ್ಕೃತ/ಪಾಲಿ/ಪ್ರಾಕೃತ ಭಾಷೆಗಳನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?

ಶಿಷ್ಯವೇತನಕ್ಕೆ ಆನ್‌ಲೈನ್‌ನಲ್ಲಿ ಸಲ್ಲಿಸಲಾಗುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಮತ್ತು ಬೇರಾವುದೇ ರೀತಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ದಿನಾಂಕ : 10-07-2023 ರಿಂದ 31-10-2023 ರವರೆಗೆ ಅವಕಾಶ ನೀಡಲಾಗಿದೆ.

ಸಂಬಂಧಪಟ್ಟ ಯೋಜನೆಗಳ ಮಾರ್ಗಸೂಚಿಯನ್ವಯ, ಯುಕ್ತ ಅಧಿಕಾರಿಯವರಿಂದ ದೃಢೀಕರಿಸಲ್ಪಟ್ಟ ಆನ್‌ಲೈನ್‌ನಲ್ಲಿ ಸಲ್ಲಿಸುವ ಅರ್ಜಿಯ ಮುದ್ರಿತ ಪ್ರತಿಯ ಜತೆಗೆ ಪ್ರಕಟಣೆಗಳು/ ಪುಸ್ತಕಗಳು/ ಅಗತ್ಯ ದಾಖಲಾತಿಗಳ ಮುದ್ರಿತ ಪ್ರತಿಗಳನ್ನು 20-09-2023ರೊಳಗೆ ಅರ್ಜಿಗಳನ್ನು ಸಲ್ಲಿಸಲು ತಿಳಿಸಲಾಗಿದೆ.

ನಿರ್ದೇಶಕರು (ಕೇಂದ್ರೀಯ ಯೋಜನೆಗಳು), (ಯೋಜನೆಯ ಹೆಸರು) ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, 56-57 ಇನ್‌ಸ್ಟಿಟ್ಯೂಷನಲ್ ಏರಿಯಾ, ಜನಕಪುರಿ, ನವದೆಹಲಿ-110058 ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಪ್ರತ್ಯೇಕವಾಗಿ ಕಳುಹಿಸಬೇಕು.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ |  ಇಲ್ಲಿದೆ ಮಾಹಿತಿ..

ಅರ್ಜಿಗಳನ್ನು ಭರ್ತಿ ಮಾಡುವ ಮುನ್ನ ಯೋಜನೆಯ ಮಾರ್ಗಸೂಚಿಗಳನ್ನು ಓದಿಕೊಳ್ಳತಕ್ಕದ್ದು, ಪ್ರತಿ ಯೋಜನೆಯ ಮಾರ್ಗಸೂಚಿಗಳು, ಸಂಭಾವನೆ, ಅಗತ್ಯ ದಾಖಲಾತಿಗಳು, ಅರ್ಜಿ ಸಲ್ಲಿಸುವ ಬಗ್ಗೆ ಮತ್ತು ಮುದ್ರಿತ ಪ್ರತಿಗಳ ಸಲ್ಲಿಕೆ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ :

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ https://sanskrit.nic.in/schemes/ ಭೇಟಿ ನೀಡಬಹುದಾಗಿದೆ.

NCC ವಿದ್ಯಾರ್ಥಿಗಳಿಗೆ ಭಾರತದ ಮಿಲಿಟರಿ ಪಡೆಯಲ್ಲಿ ಉದ್ಯೋಗ ಅವಕಾಶ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

ಏನಾದರೂ ಸ್ಪಷ್ಟನೆ ಅಥವಾ ಅನುಮಾನಗಳು ಇದ್ದಲ್ಲಿ help.schemes@csu.co.inಗೆ ಇ-ಮೇಲ್ ಮಾಡುವ ಮೂಲಕ ಇಲ್ಲವೇ ಮೇಲ್ಕಾಣಿಸಿರುವ ಅಂಚೆ ವಿಳಾಸವನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button