Schemes

ಕನ್ನಡ ಮಾಧ್ಯಮದಲ್ಲೂ ಇನ್ನು ಸಿಬಿಎಸ್‌ಇ ಶಿಕ್ಷಣ ಲಭ್ಯ | ಏನಿದು ಹೊಸ ನಿಯಮ ?

Share news

ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಐಪಿ) ಅಡಿ ಇನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಮಾಧ್ಯಮಗಳಲ್ಲೂ ಶಿಕ್ಷಣ ನೀಡಬಹುದು ಎಂದು ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ ಇ, ತನ್ನ ಅಧೀನದ ಶಾಲೆಗಳಿಗೆ ಸೂಚಿಸಿದೆ. ಈವರೆಗೆ ಸಿಬಿಎಸ್‌ಇ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ ನಡೆಯುತ್ತಿದ್ದವು. ಹೊಸ ಸೂಚನೆಯಿಂದ ಇನ್ನು ರಾಜ್ಯ ಪಠ್ಯಕ್ರಮಗಳ ಶಾಲೆಯಂತೆ ಕನ್ನಡದಂಥ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲೂ ಕೇಂದ್ರೀಯವಿದ್ಯಾಲಯ ಹಾಗೂ CBSE ಪಠ್ಯಕ್ರಮದ ಇತರ ಶಾಲೆಗಳು ಬೋಧಿಸಬಹುದಾಗಿದೆ.

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?

ಈ ಬಗ್ಗೆ ಶಾಲೆಗಳಿಗೆ ಪತ್ರ ಮುಖೇನ ಶುಕ್ರವಾರ ಸೂಚನೆ ನೀಡಿರುವ ಸಿಬಿಎಸ್‌ಇ, ‘ಪ್ರಾದೇಶಿಕ ಭಾಷೆಯಲ್ಲೂ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂಬ ಎನ್‌ಇಪಿ ನೀತಿಯಂತೆ ಸಿಬಿಎಸ್‌ ಇ ಶಾಲೆಗಳು ತಮ್ಮಲ್ಲಿನ ಲಭ್ಯ ಸಂಪನ್ಮೂಲ ಬಳಸಿಕೊಂಡು, ತಜ್ಞರ ಸಂಪರ್ಕಿಸಿ ಮತ್ತು ಇತರಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಹುಭಾಷೆಗಳಲ್ಲಿ ಶಿಕ್ಷಣ ನೀಡಬಹುದು, ಇದಲ್ಲದೆ, ಮುಂದಿನ ವರ್ಷದಿಂದ ಸಿಬಿಎಸ್‌ಇ ಪಠ್ಯಗಳು 22 ನಿಗದಿತ ಭಾಷೆಗಳಲ್ಲಿ ಲಭ್ಯ ಆಗಲಿವೆ’ ಎಂದಿದೆ.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ |  ಇಲ್ಲಿದೆ ಮಾಹಿತಿ..


Share news

Related Articles

Leave a Reply

Your email address will not be published. Required fields are marked *

Back to top button