Schemes

ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳಿಗಾಗಿ “ದೀನ್ ದಯಾಳ್ ಸ್ಪರ್ಶ ಯೋಜನೆ” | ಏನಿದು ಯೋಜನೆ ?

Share news

ಭಾರತೀಯ ಅಂಚೆ ಇಲಾಖೆಯು ವಿದ್ಯಾರ್ಥಿಗಳಲ್ಲಿ ಅಂಚೆಚೀಟಿಗಳ ಸಂಗ್ರಹ ಆಸಕ್ತಿ ಬೆಳೆಸುವ ಉದ್ದೇಶದಿಂದ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ ಎಂಬ ವಿದ್ಯಾರ್ಥಿವೇತನ ಪ್ರಾರಂಭಿಸಿದೆ. ಅಂಚೆಚೀಟಿ ಸಂಗ್ರಹ ವನ್ನು ಹವ್ಯಾಸವಾಗಿ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ವೃತ್ತ ಮಟ್ಟದಲ್ಲಿ ಅಂಚೆಚೀಟಿಗಳ ರಸಪ್ರಶ್ನೆ ಮತ್ತು ಅಂಚೆಚೀಟಿ ಸಂಗ್ರಹ ಸ್ಪರ್ಧೆ ನಡೆಸಲಿದೆ. ಇದರ ಆಧಾರದಲ್ಲಿ 2023-24ನೇ ಸಾಲಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿವೇತನವು ವಾರ್ಷಿಕ 6,000 ರೂ. ಒಳಗೊಂಡಿದೆ.

BHARATHAVANI NEWS

ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನ

ವೆಬ್‌ಸೈಟ್ www.karnataka post.gov.in ಗೆ ಭೇಟಿ ನೀಡಬಹುದು.

ಪ್ರತಿ ತಿಂಗಳು 500 ರೂ.ಗಳನ್ನು ಪಾಲಕರು, ವಿದ್ಯಾರ್ಥಿ ಹೆಸರಿನ ಜಂಟಿಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆ ಪಡೆಯಲು ಕೆಲ ಷರತ್ತುಗಳಿವೆ. ಮಾನ್ಯತೆ ಪಡೆದ ಶಾಲೆಯ ಜತೆಗೆ ಆ ಶಾಲೆಯಲ್ಲಿ ಅಂಚೆಚೀಟಿ ಸಂಗ್ರಹ ಕ್ಲಬ್ ಇದ್ದು, ಅದರ ಸದಸ್ಯನಾಗಿರಬೇಕು. ಶಾಲೆಯಲ್ಲಿ ಕ್ಲಬ್ ಇಲ್ಲದಿದಲ್ಲಿ ತನ್ನದೇ ಆದ ಅಂಚೆಚೀಟಿಗಳ ಸಂಗ್ರಹ ಖಾತೆ ಹೊಂದಿರುವ ವಿದ್ಯಾರ್ಥಿಯನ್ನು ಪರಿಗಣಿಸಲಾಗುತ್ತದೆ. ಸ್ಕಾಲರ್‌ಶಿಪ್ ಆಯ್ಕೆ ಸಮಯದಲ್ಲಿ ವಿದ್ಯಾರ್ಥಿಯು 2023ರ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ ಶೇ.60 ಅಂಕ ಅಥವಾ ತತ್ಸಮಾನ ಗ್ರೇಡ್ ಗಳಿಸಿರಬೇಕು.

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?

ಆಯ್ಕೆ ಪ್ರಕ್ರಿಯೆ : ಮೊದಲ ಹಂತದಲ್ಲಿ ಅಂಚೆಚೀಟಿಗಳ ಕುರಿತ ಲಿಖಿತ ರಸಪ್ರಶ್ನೆ ಹಾಗೂ 2ನೇ ಹಂತದಲ್ಲಿ ಅಂಚೆಚೀಟಿಗಳ ಸಂಗ್ರಹ ಯೋಜನೆ ಕುರಿತದ್ದಾಗಿರುತ್ತದೆ. ಪ್ರಾದೇಶಿಕ ಮಟ್ಟದಲ್ಲಿ ಲಿಖಿತ ರಸಪ್ರಶ್ನೆ ಸೆ.30ರಂದು ನಡೆಯಲಿದ್ದು, ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನವಾಗಿರುತ್ತದೆ. ಎರಡನೇ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳು 4 ರಿಂದ 5 ಪುಟ ಮೀರದ ಅಂಚೆಚೀಟಿ ಸಂಗ್ರಹ ಪ್ರಾಜೆಕ್ಟ್ ಅನ್ನು 15 ದಿನಗಳೊಳಗೆ ಸಲ್ಲಿಸಬೇಕಾಗುತ್ತದೆ. ವಿವರಗಳಿಗೆ ಕರ್ನಾಟಕ ಪೋಸ್ಟಲ್ ಸರ್ಕಲ್ ವೆಬ್‌ಸೈಟ್ www.karnataka post.gov.in ಗೆ ಭೇಟಿ ನೀಡಬಹುದು.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?


Share news

Related Articles

Leave a Reply

Your email address will not be published. Required fields are marked *

Back to top button