Schemes

ವಿದ್ಯಾರ್ಥಿ ಬಸ್ ಪಾಸ್‌ಗೆ ಅರ್ಜಿ ಸಲ್ಲಿಕೆ ಹೇಗೆ ? ಶುಲ್ಕವೇಷ್ಟು ? ಮಾಹಿತಿ ಇಲ್ಲಿದೆ..

Share news

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬಿಎಂಟಿಸಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು/ಡಿಪ್ಲೊಮ, ಐಟಿಐ, ವೃತ್ತಿಪರ ಕೋರ್ಸ್‌ಗಳು, ಸಂಜೆ ಕಾಲೇಜು, ಪಿಹೆಚ್‌ಡಿ ವಿದ್ಯಾರ್ಥಿಗಳು 2023-24ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಹಳೇ ಬಸ್ ಪಾಸ್ ಅವಧಿ ಈಗಾಗಲೇ ಜುಲೈ 15 ರಂದು ಮುಗಿದಿದೆ. ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ ಹೊಸ ಪಾಸ್ ಪಡೆದುಕೊಳ್ಳಿ. ಬಸ್ ಪಾಸ್ ಗಳನ್ನು ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ನೀಡಲಾಗುತ್ತದೆ.

ವಾರ್ಷಿಕ ಬಸ್ ಪಾಸ್ ಪಡೆಯಲು ಹೊಸ ದರವನ್ನು ಹಾಗೂ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೊರ್ಟಲ್ https://sevasindhu.karnataka.gov.in/ ಲಿಂಕ್ ಓಪನ್ ಮಾಡಿದೆ.

ಬಸ್‌ ಪಾಸ್‌ ಪಡೆಯಲು ಬೇಕಾದ ದಾಖಲೆಗಳು :

ಖಾಯಂ ವಿಳಾಸ ದಾಖಲೆ ( ಆಧಾರ್‌ ಕಾರ್ಡ್).
ಶಾಲಾ/ಕಾಲೇಜಿನ 2023-24ನೇ ಸಾಲಿನ ಪ್ರವೇಶ ರಸೀದಿ.
ವಿಳಾಸ ಬದಲಾವಣೆ ಇದ್ದಲ್ಲಿ ದಾಖಲೆ ಪತ್ರ.
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯ.
ಪಾಸ್‌ಪೋರ್ಟ್ ಅಳತೆಯ ಫೋಟೋ.

2022-23ನೇ ಸಾಲಿನ “ರಾಜ್ಯ ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

ಪಾಸ್‌ ಅರ್ಜಿ ಸಲ್ಲಿಸುವುದು ಹೇಗೆ?

  • ಆನ್‌ಲೈನ್‌ಲ್ಲಿ ಬಸ್‌ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ https://sevasindhu.karnataka.gov.in/ ಭೇಟಿ ನೀಡಿ.
  • ಮುಖಪುಟದಲ್ಲಿ ಇಲಾಖೆಗಳು ಸೇವೆಗಳು ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಮತ್ತೊಂದು ಪುಟ ತೆರೆದುಕೊಳ್ಳುತ್ತದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ವಿದ್ಯಾರ್ಥಿ ಬಸ್‌ಪಾಸ್‌ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ.
  • ನವೀಕರಣ ವಿದ್ಯಾರ್ಥಿ ಪಾಸ್‌ಗಾಗಿ ಆನ್‌ಲೈನ್ ಅರ್ಜಿ ಎಂಬಲ್ಲಿ ಕ್ಲಿಕ್‌ ಮಾಡಿ.
  • ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನೀಡಿ ರಿಜಿಸ್ಟರ್ ಮಾಡಿಕೊಂಂಡು, ನಿಮ್ಮ ಲಾಗಿನ್ ಐಡಿ ಬಳಸಿ ಲಾಗಿನ್ ಆಗಿ.
  • ನಂತರ ಆಧಾರ್‌ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್‌.ಡಿ. ಸಂಖ್ಯೆ, ಶಾಲೆ, ಕಾಲೇಜು ಇತ್ಯಾದಿ ವಿವರಗಳನ್ನು ನಮೂದಿಸಿ.
  • ಪ್ರವೇಶದ ಸಮಯದಲ್ಲಿ ಶಿಕ್ಷಣ ಸಂಸ್ಥೆಗೆ ಶುಲ್ಕ ಪಾವತಿಸಿದ ರಸೀದಿಯನ್ನು ಅಪ್ಲೋಡ್‌ ಮಾಡಿ.
  • ವಿದ್ಯಾರ್ಥಿಯ ಪಾಸ್‌ ಫೋರ್ಟ್‌ ಅಳತೆಯ ಭಾವಚಿತ್ರವನ್ನು jpeg/jpg/png/ಫೈಲ್‌ ನಲ್ಲಿ ಅಪ್ಲೋಡ್‌ ಮಾಡಿ. ಭಾವಚಿತ್ರವು ಒಂದು ಎಂಬಿ ಗಿಂತ ಕಡಿಮೆ ಇರಬೇಕು.
  • ವಿದ್ಯಾರ್ಥಿ ಪಾಸ್‌ ಅಪ್ಲಿಕೇಶನ್‌ನಲ್ಲಿ ನಮೂದಿಸಲಾದ ಮೊಬೈಲ್‌ ನಂಬರ್‌ಗೆ ಒಟಿಪಿ ಬರುತ್ತದೆ.
  • ನಂತರ ಕೆಎಸ್‌ ಆರ್‌ಟಿಸಿ ಸಂಸ್ಥೆಯಿಂದ ಅನುಮೋದನೆಯ ಎಸ್‌ಎಂಎಸ್‌ ಕಳಿಸಲಾಗುತ್ತದೆ.
  • ಅನುಮೋದನೆ ಎಸ್‌ಎಂಎಸ್‌ ಸ್ವೀಕರಿಸಿದ ನಂತರ ಹತ್ತಿರದ ಪಾಸ್‌ ವಿತರಣಾ ಕೇಂದ್ರಕ್ಕೆ ತೆರಳಿ ಪಾಸ್‌ ಪಡೆದುಕೊಳ್ಳಿ.

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಬೆಳ್ಳಿ ಗೆದ್ದ ಹಾಸನದ ಡಿಪಿ ಮನು

ಬಸ್ ಪಾಸ್ ದರ :

ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ – ಸಾಮಾನ್ಯ – ರೂ. 150/-. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ – ರೂ.150/-

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ – ಸಾಮಾನ್ಯ – ರೂ. 750/-. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ – ರೂ.150/-

ಪ್ರೌಢಶಾಲೆ ಬಾಲಕಿಯರು – ಸಾಮಾನ್ಯ – ರೂ.550/-, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ – ರೂ. 150/-.

ಕಾಲೇಜು/ ಡಿಪ್ಲೊಮ – ಸಾಮಾನ್ಯ – ರೂ. 1,050/-, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ – ರೂ. 150/-.

ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ – ಸಾಮಾನ್ಯ – ರೂ. 1310/-, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ – ರೂ. 160/-.

ವೃತ್ತಿಪರ ಕೋರ್ಸ್ – ಸಾಮಾನ್ಯ – ರೂ.1550/-, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ – ರೂ.150/-.

ಸಂಜೆ ಕಾಲೇಜು/ಪಿಹೆಚ್‌ಡಿ – ಸಾಮಾನ್ಯ – ರೂ.1350/-, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ – ರೂ.150/-.

ಇಂದೇ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳಿ. ಬಸ್ ಪಾಸ್ ಗಳನ್ನು ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ನೀಡಲಾಗುತ್ತದೆ.

ವೇಗದ ಪಾವತಿ ವ್ಯವಸ್ಥೆ UPI ಮತ್ತು ಸ್ಥಳೀಯ ಕರೆನ್ಸಿಗಳ ವಹಿವಾಟನ್ನು ಲಿಂಕ್ ಮಾಡಲು ಭಾರತ ಇಂಡೋನೇಷ್ಯಾ ಮಾತುಕತೆ


Share news

Related Articles

Leave a Reply

Your email address will not be published. Required fields are marked *

Back to top button