Schemes

ಗಮನಿಸಿ : ಇನ್ಮೂಂದೆ ಮನೆ ಬಾಗಿಲಿಗೆ DL, RC ಕಾರ್ಡ್ ರವಾನೆ | ಇಲ್ಲಿದೆ ಮಾಹಿತಿ…

Share news

ಕರ್ನಾಟಕ ಸಾರಿಗೆ ಇಲಾಖೆ ಮತ್ತು ಕರ್ನಾಟಕ ವೃತ್ತದ ಅಂಚೆ ಇಲಾಖೆ ವತಿಯಿಂದ ಸ್ಪೀಡ್ ಪೋಸ್ಟ್ ಮೂಲಕ RC ಮತ್ತು DL ಸ್ಮಾರ್ಟ್ ಕಾರ್ಡ್‌ಗಳ ಬುಕಿಂಗ್ ಮತ್ತು ವಿತರಣೆಗಾಗಿ ತಿಳುವಳಿಕೆ ಪತ್ರದ ವಿನಿಮಯವನ್ನು ಮಾಡಿಕೊಳ್ಳಲಾಯಿತು.

ಅಂಚೆ ಇಲಾಖೆಯು ರಾಜ್ಯದ 67 ಆರ್‌ಟಿಒ ಕಚೇರಿಗಳ ಆವರಣದಿಂದ RC/DL ದಾಖಲೆಗಳ ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗಿದೆ.

BHARATHAVANI NEWS

ಲಘು ವಾಹನಗಳ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

ಇವುಗಳ ಬುಕಿಂಗ್‌ಗಾಗಿ ಕೇಂದ್ರೀಕೃತ ಸ್ಪೀಡ್ ಪೋಸ್ಟ್ ಖಾತೆಯನ್ನು ರಚಿಸಲಾಗಿದೆ ಮತ್ತು ಗುರುತಿಸಲಾದ 67 ಅಂಚೆ ಕಚೇರಿಗಳಲ್ಲಿ ಸಕ್ರಿಯಗೊಳಿಸಲಾಗಿದೆ. ರಾಜ್ಯದ ವಿವಿಧ RTO ಗಳಲ್ಲಿ ಕಾಯ್ದಿರಿಸಿದ RC ಮತ್ತು DL ಗಾಗಿ ಒಂದೇ ಪಾವತಿಯನ್ನು ಮಾಡಲು ರಾಜ್ಯ ಸಾರಿಗೆ ಇಲಾಖೆಗೆ ಕೇಂದ್ರೀಕೃತ ಬಿಲ್ಲಿಂಗ್ ಮತ್ತು ಪಾವತಿ ಸೌಲಭ್ಯವನ್ನು ಸಹ ಒದಗಿಸಲಾಗಿದೆ.

ಪಿ.ಎಂ ವಿಶ್ವಕರ್ಮ ಯೋಜನೆಗೆ ಒಪ್ಪಿಗೆ | ಶೇ 5ರ ಬಡ್ಡಿ ದರದಲ್ಲಿ 1 ಲಕ್ಷದ ವರಗೆ ಸುಲಭ ಸಾಲ ಸೌಲಭ್ಯ | ಇಲ್ಲಿದೆ ಮಾಹಿತಿ…

ಪ್ರತಿ ತಿಂಗಳು ಈ ಎಲ್ಲಾ 67 RTO ಸ್ಥಳಗಳಿಂದ ಸ್ಪೀಡ್ ಪೋಸ್ಟ್ ಖಾತೆಯ ಅಡಿಯಲ್ಲಿ 5 ಲಕ್ಷ ಸ್ಮಾರ್ಟ್ ಕಾರ್ಡ್‌ಗಳನ್ನು ಬುಕ್ ಮಾಡುವ ನಿರೀಕ್ಷೆಯಿದೆ. ಸಾರಿಗೆ ಇಲಾಖೆ ಆಯುಕ್ತರಾದ ಶ್ರೀ ಎ.ಎಂ ಯೋಗೇಶ್, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ ಶ್ರೀ ಎಸ್. ರಾಜೇಂದ್ರ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?


Share news

Related Articles

Leave a Reply

Your email address will not be published. Required fields are marked *

Back to top button