Schemes

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

Share news

ವಿದೇಶ ಪ್ರಯಾಣಕ್ಕಾಗಿ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಅರ್ಜಿದಾರರು ಇನ್ನು ಮುಂದೆ ಅರ್ಜಿ ಸಲ್ಲಿಸುವಾಗ ಡಿಜಿಲಾಕರ್‌ ಮೂಲಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಈ ನಿಯಮವು ಆ. 5ರಿಂದಲೇ ಜಾರಿಗೆ ಬಂದಿದೆ.

BHARATHAVANI NEWS

“ಡಿಜಿಲಾಕರ್‌ ಬಳಸಿದರೆ, ಪಾಸ್‌ಪೋರ್ಟ್‌ ಅರ್ಜಿಯ ವೆರಿಫಿಕೇಷನ್‌ ಪ್ರಕ್ರಿಯೆಯಲ್ಲಿ ಯಾವುದೇ ಹಾರ್ಡ್‌ ಕಾಪಿ ತರುವ ಅಗತ್ಯ ಇರುವುವಿಲ್ಲ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಹೊಸ ನಿಯಮದಿಂದ ಅರ್ಜಿ ಪ್ರಕ್ರಿಯೆಯ ಸಮಯ ಕಡಿಮೆಯಾಗಲಿದ್ದು, ಪಾಸ್‌ಪೋರ್ಟ್‌ ಅಪ್ಲಿಕೇಶನ್‌ ಪ್ರಕ್ರಿಯೆಯ ಗುಣಮಟ್ಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಅರ್ಜಿದಾರರು ತಮ್ಮ ಪಾಸ್‌ಪೋರ್ಟ್‌ ಅರ್ಜಿಯನ್ನು ಅಧಿಕೃತ ವೆಬ್‌ಸೈಟ್‌ ‘http://passportindia.gov.in‘ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

ಡಿಜಿಲಾಕರ್‌ ಎನ್ನುವುದು ಭಾರತೀಯ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ಸಚಿವಾಲಯ ಒದಗಿಸುತ್ತಿರುವ ಡಿಜಿಟಲ್‌ ವ್ಯಾಲೆಟ್‌ ಸೇವೆಯಾಗಿದೆ. ಇದರ ಅಡಿಯಲ್ಲಿ ಬಳಕೆದಾರರು ಸರಕಾರದಿಂದ ಪಡೆದ ಎಲ್ಲಾ ದಾಖಲೆಗಳನ್ನು ಸುರಕ್ಷಿತ ರೀತಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದಾಗಿದೆ. 

ಆನ್‌ಲೈನ್‌ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಹೇಗೆ ? | ಇಲ್ಲಿದೆ ಸಂಪೂರ್ಣ ಮಾಹಿತಿ…

ಡಿಜಿಲಾಕರ್ ಖಾತೆಯನ್ನು ತೆರೆಯಲು ಬಳಕೆದಾರರು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು. ಮತ್ತು ಈ ಸಂಖ್ಯೆಯನ್ನು ಈಗಾಗಲೇ ಆಧಾರ್‌ಗೆ ಲಿಂಕ್ ಮಾಡಿರಬೇಕು, ಡಿಜಿಲಾಕರ್ ಖಾತೆಗೆ ಲಾಗ್ ಇನ್ ಮಾಡುವಾಗ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಬಳಕೆದಾರರಿಗೆ ಒನ್ ಟೈಮ್ ಪಾಸ್‌ವರ್ಡ್‌ (ಒಟಿಪಿ) ಕಳುಹಿಸಲಾಗುತ್ತದೆ ನಂತರ ಸರಕಾರದಿಂದ ಪಡೆದ ಎಲ್ಲಾ ದಾಖಲೆಗಳನ್ನು ಸುರಕ್ಷಿತ ರೀತಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದಾಗಿದೆ.

BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button