Schemes

ಗಮನಿಸಿ : ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿ.ಇಡಿ ಕಡ್ಡಾಯವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್

Share news

ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿ.ಇಡಿ ವಿದ್ಯಾರ್ಹತೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಜೂನ್ 28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ಸರ್ಕಾರದ ಈ ತೀರ್ಮಾನ ಅತಾರ್ಕಿಕ ಎಂದು ಹೇಳಿದೆ. ಬಿ.ಇಡಿ ಆಗಿರಬೇಕೆಂಬ ಅರ್ಹತೆಯನ್ನು ಸರ್ಕಾರ ನಿಗದಿ ಮಾಡಿರುವುದೇ ಸಂವಿಧಾನ ಮತ್ತು ಕಾನೂನಿನ ಉಲ್ಲಂಘನೆ.

BHARATHAVANI NEWS

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?

ಬಿ.ಇಡಿ ವಿದ್ಯಾರ್ಹತೆ ನಿಗದಿಗೆ ಸರ್ಕಾರ ನೀಡಿರುವ ಏಕೈಕ ಸಮರ್ಥನೆಯೆಂದರೆ ಅದು ಉನ್ನತ ಅರ್ಹತೆ ಎಂಬುದಾಗಿದೆ. ಇದು ನೀತಿಗೆ ಸಂಬಂಧಿಸಿದ ನಿರ್ಧಾರವೆಂದು ಪರಿಗಣಿಸಿದರೂ ಪ್ರಾಥಮಿಕ ಶಾಲಾ ಹಂತಕ್ಕೆ ಸಮರ್ಪಕ ಎನಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ರೂಪಿತವಾಗಿರುವ ಶಿಕ್ಷಣ ಹಕ್ಕು ಕಾಯ್ದೆಗೂ ಶಿಕ್ಷಕರು ಬಿ.ಇಡಿ ಪದವಿಗಳಿಸಿರಬೇಕು ಎಂಬುದಕ್ಕೂ ಸಂಬಂಧವಿಲ್ಲ ಮತ್ತು ಪ್ರಾಥಮಿಕ ತರಗತಿಯ ಬೋಧನೆಗೆ ಬಿ.ಇಡಿ ವಿದ್ಯಾರ್ಹತೆ ಅವಶ್ಯಕವೂ ಇಲ್ಲ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button