Schemes

ರಾಜ್ಯ ಸರ್ಕಾರ : ಕಟ್ಟಡ ಕಾರ್ಮಿಕರಿಗೆ ಸಿಗಲಿದೆ ವೈದ್ಯಕೀಯ ಸಹಾಯಧನ | ಸಹಾಯಧನ ಪಡೆಯುವುದು ಹೇಗೆ ?

Share news

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ನೋಂದಾಯಿತ ಫಲಾನುಭವಿ ಮತ್ತು ಅವನ ಅವಲಂಬಿತರು ರಾಜ್ಯ ಸರ್ಕಾರದ ಯಾವುದೇ ವಿಮೆ ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಅಥವಾ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರ ಷಡ್ಯೂಲ್-1 ರಲ್ಲಿ ನಮೂದಿಸಿರುವ ಆಸ್ವತ್ರೆಗಳಲ್ಲಿ ದಾಖಲಾದಾಗ ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗುತ್ತದೆ.

BHARATHAVANI NEWS

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

ಕನಿಷ್ಠ 48 ಗಂಟೆಗಳವರೆಗೆ ಸತತವಾಗಿ ಆಸ್ಪತ್ರೆಯಲ್ಲಿ ದಾಖಲಾದಾಗ, ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗಿರುತ್ತದೆ. ಪ್ರತಿ ಗರಿಷ್ಠ ರೂ.2,00,000 ಮಿತಿಗೆ ಒಳಪಟ್ಟು ಸಹಾಯಧನ ಮಂಜೂರು ಮಾಡುತ್ತದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ : https://karbwwb.karnataka.gov.in/

ಪೂರಕ ದಾಖಲಾತಿಗಳು :

  • ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ (ದೃಢೀಕೃತ)
  • ಉದ್ಯೋಗ ದೃಡೀಕರಣ ಪತ್ರ
  • ಬ್ಯಾಂಕ್ ಖಾತೆಯ ದಾಖಲೆ

ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ
ಫಲಾನುಭವಿಯು/ಅವಲಂಬಿತ ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದ (ಶೆಡ್ಯೂಲ್ 1ಗೆ ಸೇರಿದ ) ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ದಿನ ಒಳರೋಗಿಯಾಗಿ ದಾಖಲೆಯಾಗಿರುವ ಬಗ್ಗೆ ವೈದ್ಯಕೀಯ ದಾಖಲೆಯನ್ನು ಸಲ್ಲಿಸಬೇಕು.
ನಮೂನೆ 22 ಎ ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?

ಅರ್ಜಿದಾರರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸುವುದು

ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ 6 ತಿಂಗಳೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ : https://karbwwb.karnataka.gov.in/

ಭೇಟಿ ನೀಡಿ : https://kbocwwb.karnataka.gov.in/login

ಕಾರ್ಮಿಕ ಸಹಾಯವಾಣಿ : 155214

ಲಘು ವಾಹನಗಳ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

ಅರ್ಜಿ ಅನ್ವಯಿಸುವ ವಿಧಾನ:

  1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
  2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
  3. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

Share news

Related Articles

Leave a Reply

Your email address will not be published. Required fields are marked *

Back to top button