Schemes

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

Share news

ಕರ್ನಾಟಕ ರಾಜ್ಯದ ಎಲ್ಲಾ ರೈತರು ಕರ್ನಾಟಕ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಈ ಯೋಜನೆಯು ರೈತರಿಗೆ ಆದಾಯವನ್ನು ಹೆಚ್ಚಿಸಲು ಸಹಾಯಕವಾಗಿದೆ. ಕೇವಲ 3 ವರ್ಷಗಳ ಕಾಲ ಮರವನ್ನು ನೆಡಲು ಮತ್ತು ಪೋಷಿಸಲು ಆರ್ಥಿಕ ಸಹಾಯವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ. ಈ ಕಾರ್ಯಕ್ರಮದ ಅನ್ವಯ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹ ಧನ ಪಡಿಯುದಲ್ಲದೇ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು, ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ. 

ಸಸಿಗಳಿಗೆ ಸಬ್ಸಿಡಿ ದರಗಳು :

  • 5×8 ಮತ್ತು 6×9 ಗಾತ್ರದ ಸಸಿ: ಪ್ರತಿ ಸಸಿಗೆ ಒಂದು ರೂಪಾಯಿ
  • 8×12 ಗಾತ್ರದ ಸಸಿ: ಪ್ರತಿ ಸಸಿಗೆ 3 ರೂಪಾಯಿ
  • 10×16 ಮತ್ತು 14×20 ಗಾತ್ರದ ಸಸಿ: ಪ್ರತಿ ಸಸಿಗೆ 5 ರೂಪಾಯಿ

ಮೊಳಕೆ ಗಾತ್ರ ಮತ್ತು ಜಾತಿಯ ಆಧಾರದ ಮೇಲೆ ರೈತರು ಯಾವುದೇ ಗಾತ್ರವನ್ನು ಆಯ್ಕೆ ಮಾಡಬಹುದು. ರೈತರು ನೋಂದಣಿ ಮಾಡಿಕೊಳ್ಳುವಾಗ 10 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಒಬ್ಬ ರೈತ ತನ್ನ ಜಮೀನಿನಲ್ಲಿ ಹೆಕ್ಟೇರಿಗೆ 400 ಅರಣ್ಯ ಮರಗಳನ್ನು ಬೆಳೆಸಬಹುದು.

ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?

ಯೋಜನೆಯ ಅರ್ಹತೆ :

  • ಕರ್ನಾಟಕದ ರೈತರು
  • ಜಮೀನು ಹೊಂದಿರುವ ರೈತರು

ಯೋಜನೆಯ ಪ್ರಯೋಜನ :

  • ಸಸಿಗೆ ಮೊದಲ ವರ್ಷದಲ್ಲಿ 35 ರೂಪಾಯಿ ಪಾವತಿಸಲಾಗುವುದು. *
  • ಸಸಿಗೆ ಎರಡನೇ ವರ್ಷದಲ್ಲಿ 40 ರೂಪಾಯಿ ಪಾವತಿಸಲಾಗುವುದು. *
  • ಸಸಿಗೆ ಮೂರನೇ ವರ್ಷದಲ್ಲಿ 50 ರೂಪಾಯಿ ಪಾವತಿಸಲಾಗುವುದು.

ಬೆಳೆ ವಿಮೆ ಪಡೆಯಲು ನೋಂದಣಿ ಆರಂಭ | ಇಲ್ಲಿದೆ ಮಾಹಿತಿ..

ಬೇಕಾದ ದಾಖಲೆಗಳು ಯಾವುದು?

  • ನಿವಾಸ ಪುರಾವೆ.
  • ಜಾತಿ ಪ್ರಮಾಣ ಪತ್ರ. (ಅನ್ವಯವಾದಲ್ಲಿ).
  • ಆಧಾರ್ ಕಾರ್ಡ್.
  • ಪಾಸ್‌ಪೋರ್ಟ್ ಗಾತ್ರದ ಫೋಟೋ.
  • ಸಸಿಗಳ ವಿವರಗಳು.
  • ಬ್ಯಾಂಕ್ ಖಾತೆ ವಿವರಗಳು.
  • ಜಮೀನಿನ ವಿವರಗಳು/ ಜಮೀನಿನ ಪಹಣಿ

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ |  ಇಲ್ಲಿದೆ ಮಾಹಿತಿ..

ಹೇಗೆ ಅರ್ಜಿ ಸಲ್ಲಿಸುವುದು ?

ಹಂತ 1: ಕರ್ನಾಟಕ ಕೃಷಿ ಅರಣ್ಯ ಪ್ರೊತ್ಸಾಹ ಯೋಜನೆಗೆ ಅರ್ಜಿ ಸಲ್ಲಿಸಲು, ರೈತರು ತಮ್ಮ ಹತ್ತಿರದ ಅರಣ್ಯ ವ್ಯಾಪ್ತಿಯ ಕಚೇರಿಗೆ ಭೇಟಿ ನೀಡಬೇಕು.

ಹಂತ 2: ಆ ಕಛೇರಿಯಿಂದ ಉಚಿತವಾಗಿ ಅರ್ಜಿ ನಮೂನೆಯನ್ನು ಪಡೆಯಿರಿ.

ಹಂತ 3: ಅದನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳಿ, ಅಗತ್ಯ ದಾಖಲೆಗಳನ್ನು ಅಟೆಸ್ಟ್ ಮಾಡಲಾಗುತ್ತದೆ.

ಹಂತ 4: ನೋಂದಣಿ ಶುಲ್ಕ ರೂಪಾಯಿ 10 ಅನ್ನು ನೀಡಬೇಕಾಗುತ್ತದೆ.

ಹಂತ 5: ನಂತರ ಅರಣ್ಯಾಧಿಕಾರಿಗಳು ರೈತರಿಗೆ ಗಿಡಗಳನ್ನು ವಿತರಣೆ ಮಾಡುತ್ತಾರೆ.

ಹಂತ 6: ಪ್ರತಿ ವರ್ಷ ಅರಣ್ಯ ಅಧಿಕಾರಿಗಳು ಸಸಿಗಳನ್ನು ನೆಟ್ಟ ರೈತರ ಜಮೀನಿಗೆ ಭೇಟಿ ನೀಡುತ್ತಾರೆ.

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?


Share news

Related Articles

Leave a Reply

Your email address will not be published. Required fields are marked *

Back to top button