Schemes

ಉದ್ಯೋಗಿನಿ ಯೋಜನೆ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

Share news

ನಿರುದ್ಯೋಗಿ ಮಹಿಳೆಯರು ಸ್ವಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಯೋಜನೆಯೇ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (KSWDC)  ಉದ್ಯೋಗಿನಿ ಯೋಜನೆಯಾಗಿದೆ ( Udyogini Scheme ) . ಇದು 2015-16ರಲ್ಲಿ ಜಾರಿಗೆ ಬಂದಿದೆ. ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗ ಸ್ಥಾಪನೆಗೆ ಸಾಲವನ್ನು ನೀಡಲಾಗುತ್ತದೆ. ಅಧಿಕ ಬಡ್ಡಿದರದ ಸುಳಿಗೆ ಮಹಿಳಾ ಉದ್ಯಮಿಗಳು ಸಿಲುಕುವುದನ್ನು ತಡೆಯುವುದು ಮತ್ತು ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ ಕಡಿಮೆ ಬಡ್ಡಿದರದಲ್ಲಿ ಈ ಯೋಜನೆಯಡಿ ಸಾಲ ನೀಡಲಾಗುತ್ತದೆ.

ಯೋಜನೆಯಲ್ಲಿ ಎಷ್ಟು ಸಾಲ ನೀಡಲಾಗುತ್ತದೆ ?

  • ಗರಿಷ್ಠವಾಗಿ 3 ಲಕ್ಷ ರೂಪಾಯಿ ಸಾಲವನ್ನು ಮಹಿಳೆಯರು ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಬ್ಯಾಂಕ್‌ನಿಂದ ಪಡೆಯಲು ಸಾಧ್ಯವಾಗುತ್ತದೆ.
  • ವಿಧವೆ, ಅಂಗವೈಕಲ್ಯ ಹೊಂದಿರುವ, ಧಮನಿತ ವರ್ಗದ ಮಹಿಳೆಯರಿಗೆ ಶೇಕಡ 30ರಷ್ಟು ಅಥವಾ ಗರಿಷ್ಠ 90,000 ರೂಪಾಯಿ ಸಬ್ಸಿಡಿ ಪಡೆಯಬಹುದು.
  • ಪರಿಶಿಷ್ಠ ಪಂಗಡ/ ಪರಿಶಿಷ್ಠ ಜಾತಿಯ ಮಹಿಳೆಯರಿಗೆ ಶೇಕಡ 50ರಷ್ಟು ಅಥವಾ ಗರಿಷ್ಠ 1,50,000 ರೂಪಾಯಿ ಸಬ್ಸಿಡಿ ಪಡೆಯಬಹುದು.
  • ಸಾಲ ಮರುಪಾವತಿ ಅವಧಿಯು ವ್ಯತ್ಯಯವಾಗುತ್ತದೆ.

NCC ವಿದ್ಯಾರ್ಥಿಗಳಿಗೆ ಭಾರತದ ಮಿಲಿಟರಿ ಪಡೆಯಲ್ಲಿ ಉದ್ಯೋಗ ಅವಕಾಶ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

ಅರ್ಹತೆ :

  • ಕರ್ನಾಟಕ ರಾಜ್ಯದ ಖಾಯಂ ನಾಗರಿಕ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರು
  • 18 ವರ್ಷದಿಂದ 55 ವರ್ಷದೊಳಿಗಿನ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಈ ಸಾಲ ಸೌಲಭ್ಯ ಲಭ್ಯ
  • ಎಸ್‌ಸಿ/ ಎಸ್‌ಟಿ ವರ್ಗದವರು ಸಾಲ ಪಡೆಯಲು ವಾರ್ಷಿಕ ಆದಾಯವು 2 ಲಕ್ಷ ರೂಪಾಯಿಗಿಂತ ಕಡಿಮೆಯಾಗಿರಬೇಕು.
  • ಸಾಮಾನ್ಯ ವರ್ಗದವರು ಸಾಲ ಪಡೆಯಬೇಕಾದರೆ ವಾರ್ಷಿಕ ಆದಾಯವು 1.5 ಲಕ್ಷ ರೂಪಾಯಿಗಿಂತ ಒಳಪಟ್ಟಿರಬೇಕು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ (KSOU) ಏಕಕಾಲದಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

ಬೇಕಾದ ದಾಖಲೆಗಳು ಯಾವುದು?

  • ಅರ್ಜಿದಾರರ ಆಧಾರ್ ಕಾರ್ಡ್
  • ಅರ್ಜಿದಾರರ ಜನನ ಪ್ರಮಾಣ ಪತ್ರ
  • ವಿಳಾಸ ಹಾಗೂ ಆದಾಯ ಪುರಾವೆ (ಆದಾಯ ಪ್ರಮಾಣಪತ್ರ)
  • ಬಿಪಿಎಲ್ ಕಾರ್ಡ್ ಅಥವಾ ರೇಷನ್ ಕಾರ್ಡ್ (ಅರ್ಜಿದಾರರು ಬಿಪಿಎಲ್‌ಎಲ್ ಹೊಂದಿರಬೇಕಾಗುತ್ತದೆ)
  • ಎಸ್‌ಟಿ/ ಎಸ್‌ಸಿ ಮಹಿಳೆಯರಾಗಿದ್ದರೆ ಜಾತಿ ಪ್ರಮಾಣಪತ್ರ ಕಡ್ಡಾಯ
  • ಬ್ಯಾಂಕ್‌ ಪಾಸ್‌ಬುಕ್‌ನ ಪ್ರತಿ
  • ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯ ಇತರೆ ದಾಖಲೆಗಳು (ಅರ್ಜಿ ಸಲ್ಲಿಸುವಾಗ ಕೇಳಿದರೆ ಮಾತ್ರ)

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ (KSOU) ಹಲವು ಕೋರ್ಸ್​ಗಳಿಗೆ ಪ್ರವೇಶ ಆರಂಭ | ಯಾವೆಲ್ಲ ಕೋರ್ಸ್ ಇಲ್ಲಿವೆ ಮಾಹಿತಿ.

ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಅರ್ಹ ಮಹಿಳೆಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹಂತ 2: ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆಯಿರಿ

ಹಂತ 3: ಅಗತ್ಯ ಎಲ್ಲ ಮಾಹಿತಿಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ

ಹಂತ 4: ಎಲ್ಲ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಅಟೆಚ್ ಮಾಡಿಕೊಳ್ಳಿ

ಹಂತ 5: ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳ ಪ್ರತಿಯೊಂದಿಗೆ ಅರ್ಜಿಯನ್ನು ಕಚೇರಿಯಲ್ಲಿ ಸಲ್ಲಿಕೆ ಮಾಡಿ.

ಹಂತ 6: ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡುತ್ತಾರೆ.

ಹಂತ 7: ಅರ್ಜಿ ಅನುಮೋದನೆಯಾದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತವು ಜಮೆಯಾಗುತ್ತದೆ.

ಬೇಟಿ ನೀಡಿ ವೆಬ್​ಸೈಟ್​ : https://kswdc.karnataka.gov.in/21/udyogini/en

ಬೇಟಿ ನೀಡಿ https://govtschemes.in/karnataka-udyogini-scheme#gsc.tab=0


Share news

Related Articles

Leave a Reply

Your email address will not be published. Required fields are marked *

Back to top button