ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಗಂಡು ಮತ್ತು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್ ಪ್ರತ್ಯೇಕ ತರಬೇತಿ ನೀಡುತ್ತಿದ್ದು, ಪ್ರವೇಶ ನೋಂದಣಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ.
ಗಂಡು ಮಕ್ಕಳಿಗಾಗಿ ತಪಸ್ ಹೆಸರಿನ ಯೋಜನೆಯಲ್ಲಿ ಸಿ.ಬಿ.ಎಸ್.ಸಿ ಪಠ್ಯಕ್ರಮದಲ್ಲಿ ಪಿಯುಸಿ (ಪಿಸಿಎಂಸಿ) ಹಾಗೂ ಐಐಟಿ-ಜೆಇಇ ತರಬೇತಿ ಉಚಿತವಾಗಿ ನೀಡಲಾಗುತ್ತದೆ. ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಸಾಧನಾ ಯೋಜನೆಯಡಿ ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಪಿಯುಸಿ (ಪಿಸಿಎಂಬಿ) ಹಾಗೂ ನೀಟ್ ಸಿಇಟಿ ತರಬೇತಿ ಉಚಿತವಾಗಿ ಸಿಗಲಿದೆ. ತಪಸ್ ಮತ್ತು ಸಾಧನ ರಾಷ್ಟ್ರದ ಮಹತ್ವಕಾಂಕ್ಷಿ ಯೋಜನೆಗಳಾಗಿವೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಅಥವಾ ಹತ್ತನೇ ತರಗತಿಯ ಪರೀಕ್ಷೆ ಬರೆಯುವವರಾಗಿರಬೇಕು. 9ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 85 ಅಂಕಗಳನ್ನು ಪಡೆದಿರಬೇಕು. ಪೋಷಕರ ವಾರ್ಷಿಕ ವರಮಾನ ಎರಡು ಲಕ್ಷ ರೂಪಾಯಿ ಮೀರಿದ ಬಾರದು.
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯು 9ನೇ ತರಗತಿಯ ಅಂಕಪಟ್ಟಿ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು. ಅರ್ಜಿಗಳನ್ನು https://tapassadhana.rashtrotthana.org/ ವೆಬ್ಸೈಟ್ನಲ್ಲಿಯೇ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮತ್ತು ಪ್ರವೇಶ ಪರೀಕ್ಷೆಗಳಿಗೆ ಶುಲ್ಕವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಅಥವಾ 9481201144, 9844602529, 7975913828 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ರಾಷ್ಟ್ರೋತ್ಥಾನ ಟ್ರಸ್ಟ್ ತಿಳಿಸಿದೆ.
ಅಕ್ಟೋಬರ್ 6 ರಂದು ಮೊದಲ ಹಂತದ ಪ್ರವೇಶ ಪರೀಕ್ಷೆ
ತಪಸ್ ಮತ್ತು ಸಾಧನಾಗೆ ಆಯ್ಕೆಯನ್ನು ಲಿಖಿತ ಪರೀಕ್ಷೆಗಳು ಮತ್ತು ಆಯ್ಕೆ ಶಿಬಿರದ ಮೂಲಕ ಮಾಡಲಾಗುತ್ತದೆ. ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ಕೆಲವು ನಗರಗಳಲ್ಲಿ ಏಕಕಾಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದ ಪ್ರವೇಶ ಪರೀಕ್ಷೆ ಅಕ್ಟೋಬರ್ ಆರರಂದು ಬೆಳಿಗ್ಗೆ 10 ರಿಂದ ಮದ್ಯಾನ ಒಂದು ಗಂಟೆಯವರೆಗೆ ನಡೆಯಲಿದೆ. ಅಕ್ಟೋಬರ್ 15ರಂದು ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಎರಡನೇ ಹಂತದ ಪರೀಕ್ಷೆಯು ನವೆಂಬರ್ 10 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಜರುಗಲಿದೆ. ಫಲಿತಾಂಶ ಮತ್ತು ಇನ್ನಿತರೆ ಮಾಹಿತಿಯನ್ನು ನವೆಂಬರ್ 25ರಂದು
https://tapassadhana.rashtrotthana.org/ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.