shorts

ಚಂದ್ರಯಾನ-3 : ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್​

Share news

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಲ್ಯಾಂಡಿಂಗ್​​ಗೆ ಮಹತ್ವದ ಹೆಜ್ಜೆ ಹಾಕುವ ಸನಿಹದಲ್ಲಿದೆ. ಇಸ್ರೋ ಚಂದ್ರಯಾನ-3 ಮಿಷನ್‌ನ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ವಿಕ್ರಮ್ ಲ್ಯಾಂಡರ್​​ನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಇಸ್ರೋ ಈಗಾಗಲೇ ಲ್ಯಾಂಡಿಂಗ್ ಪ್ರದೇಶವನ್ನು ವಿಸ್ತರಿಸಿದ್ದು, 4 X 2.4 ಕಿಮೀ ಪ್ರದೇಶವನ್ನು ಹೊಂದಿರುವ ಸ್ಥಳವನ್ನು ಆಯ್ಕೆ ಮಾಡಿದೆ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್​​ನ್ನು ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಿರೀಕ್ಷೆಯಿದೆ.


Share news

Related Articles

Leave a Reply

Your email address will not be published. Required fields are marked *

Back to top button