Sports

IND vs WI 1st Test | ಅಶ್ವಿನ್ ಕೈಚಳಕ; ಭಾರತಕ್ಕೆ 141 ರನ್ ಅಂತರದಿಂದ ಗೆಲುವು

Share news

ವೆಸ್ಟಿಂಡೀಸ್ ವಿರುದ್ಧ ನೆಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇನ್ನಿಂಗ್ಸ್ ಹಾಗೂ 141 ರನ್ ಅಂತರದಿಂದ ಗೆಲುವು. ಇದರೊಂದಿಗೆ ಎರಡು ಪಂದ್ಯದ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿದಿಸಿದೆ.

ಡೊಮಿನಕದಲ್ಲಿ ನೆಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟಿಂಡೀಸ್ 150 ರನ್ ಗಳಿಗೆ ಆಲ್ಔಟ್ ಆದರು. ನಂತರ ಭಾರತದ ಪರ ಪಾದಾರ್ಪಣಾ ಪಂದ್ಯವಾಡುತ್ತಿರುವ ಯಶಸ್ವೀ ಜೈಸ್ವಾಲ್ (171) ನಾಯಕ ರೋಹಿತ್ ಶರ್ಮಾ (103) ಹಾಗೂ ದಿಗ್ಗಜ ಬ್ಯಾಟ್ಸಮನ್ ವಿರಾಟ್ ಕೊಹ್ಲಿ 76 ರನ್ ಕಲೆ ಹಾಕಿ ಟೀಮ್ ಇಂಡಿಯಾ ಇನ್ನಿಂಗ್ಸಗೆ ಬಲ ತುಂಬಿದರು.

ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾರಾಜು ಸಾಧನೆ

ಉತ್ತಮ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 421 ರನ್ ಸಿಡಿಸಿ ಇನ್ನಿಂಗ್ಸ್ ಡೆಕ್ಲಿಯರ್ ಮಾಡಿಕೊಂಡಿತು. 270 ರನ್ ಹಿನ್ನೆಡೆಯಿಂದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕಣಕ್ಕೆಇಳಿದ ವೆಸ್ಟ್ಇಂಡೀಸ್ ರವಿಚಂದ್ರನ್ ಅಶ್ವಿನ್ ಸ್ಪಿನ್ ಬಲೆಗೆ ಬಿದ್ದ ವೆಸ್ಟ್ಇಂಡೀಸ್ ಬ್ಯಾಟರಗಳು ರನಸಿಡಿಸಲು ಪರದಾಡಿದರು.

ಅಗ್ನಿಪಥ್ ಯೋಜನೆ 2023 : ವಾಯುಪಡೆಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ಅರ್ಹತೆ, ಪೂರ್ಣ ವಿವರಗಳು

ಅಶ್ವಿನ್, ಜಡೇಜಾ ಸ್ಪಿನ್ ಕೈಚಳಕಕ್ಕೆ ವೆಸ್ಟಿಂಡೀಸ್ ತಂಡದ ಬ್ಯಾಟಿಂಗ್ ಎರಡನೇ ಇನ್ನಿಂಗ್ಸ್ ನಲ್ಲೂ ಸುಧಾರಿಸಲಿಲ್ಲ. ಆಲಿಕ್ ಆತಾಜೆ ಗಳಿಸದ 27 ರನ್ ಈ ತಂಡದ ಪರ ಗರಿಷ್ಟ ಮೊತ್ತವೆನಿಸಿತು. ಹೀಗಾಗಿ, ವೆಂಡೀಸ್ ಬಳಗ 130 ರನ್ ಗೆ ಸರ್ವಪತನ ಕಂಡಿತು. ಹೀನಾಯ ಸೋಲು ಒಪ್ಪಿಕೊಳ್ಳಬೇಕಾಯಿತು. ಭಾರತದ ಪರ ರವಿಚಂದ್ರನ್ ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್,ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದರು. 171 ರನ್ ಸಿಡಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಎಂದು ಗುರುತಿಸಿಕೊಂಡರು.

ಫ್ರಾನ್ಸ್‌ ಪ್ರವಾಸದಲ್ಲಿ ಮೋದಿ ನೀಡಿದ ಭಾರತೀಯತೆ ಸಾರುವ ಉಡುಗೊರೆಗಳು ಹೇಗಿದೆ ?

ಎರಡನೇ ಪಂದ್ಯ ಟ್ರಿನಿಡಾಡ್‌ನ ಕ್ವಿನ್ಸ್ ಪಾರ್ಕ್‌ನಲ್ಲಿ ಜುಲೈ 20ರಿಂದ ಜುಲೈ 24ರ ವರೆಗೆ ನಡೆಯಲಿದೆ.


Share news

Related Articles

Leave a Reply

Your email address will not be published. Required fields are marked *

Back to top button