ಕ್ರೀಡೆ

ಬಡತನವನ್ನು ಸೋಲಿಸಿ ಭಾರತೀಯರ ಮನಗೆದ್ದ ಚಿನ್ನದ ಹುಡುಗ ಅಚಿಂತಾ ಶೆಯುಲಿ

Share news

ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಚಿಂತಾ ಶೆಯುಲಿ 73 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 313 ಕೆಜಿ ಎತ್ತುವ ಮೂಲಕ ಯಶಸ್ವಿಯಾಗಿ ಚಿನ್ನದ ಪದಕ ಗೆದ್ದು 20 ವರ್ಷದ ಅಚಿಂತಾ ಶೆಯುಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ವೇಟ್ ಲಿಫ್ಟಿಂಗ್ ನ ಮೊದಲ ಸುತ್ತಿನಲ್ಲಿ 143 ಕೆಜಿ ಭಾರ ಎತ್ತಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿ ಬಳಿಕ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 170 ಕೆಜಿ ಎತ್ತುವ ಮೂಲಕ ಒಟ್ಟು 313 ಕೆಜಿ ಎತ್ತಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇದು ಭಾರತಕ್ಕೆ ಸಂತಸವನ್ನು ನೀಡಿದೆ.

ಅಚಿಂತಾ ಶೆಯುಲಿ ಯಾರು ?

ಅಚಿಂತಾ ಶೆಯುಲಿ ನವೆಂಬರ್ 24, 2001 ರಂದು ಜನಿಸಿದರು. ಬಡ ಕುಟುಂಬದಿಂದ ಬಂದವರು. ಅವರ ತಂದೆಯ ಮರಣದ ನಂತರ ಅವರ ಸಹೋದರನೊಂದಿಗೆ ಕುಟುಂಬದ ಆದಾಯಕ್ಕಾಗಿ ಹಾಗೂ ಮನೆಯನ್ನು ನಡೆಸಲು ಹೊಲಿಗೆ ಮತ್ತು ಕಸೂತಿ ಮಾಡುತ್ತಿದ್ದರು.

ಶೆಯುಲಿಯ ತಂದೆ ಪಶ್ಚಿಮ ಬಂಗಾಳದ ಹೌರಾ ಪಟ್ಟಣದಲ್ಲಿ ಕಾರ್ಮಿಕರಾಗಿದ್ದರು. ಸ್ಥಳೀಯ ಜಿಮ್‌ಗೆ ಹೋಗಿ ತನ್ನ ದೇಹಕ್ಕೆ ತರಬೇತಿ ನೀಡುವ ತನ್ನ ಸಹೋದರನಿಂದ ಸ್ಫೂರ್ತಿ ಪಡೆದ ಅಚಿಂತಾ ಅವರು ವೇಟ್‌ಲಿಫ್ಟಿಂಗ್ ಆಯ್ಕೆಮಾಡಿಕೊಂಡರು. 20 ವರ್ಷದ ಅಚಿಂತಾ 5 ಅಡಿ 6 ಇಂಚು ಎತ್ತರ ಹೊಂದಿದ್ದಾರೆ.

2021 ಜೂನಿಯರ್ ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ ಮತ್ತು ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತರಾಗಿದ್ದಾರೆ.

ಅಚಿಂತಾ ಶೆಯುಲಿ ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ನಂತರ ವೇಟ್‌ ಲಿಫ್ಟಿಂಗ್‌ನತ್ತ ಗಮನ ಹರಿಸಲು ಪ್ರಾರಂಭಿಸಿದರು. “ನಾನು ನನ್ನ ಕೈಲಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ಮತ್ತು ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ” ಎಂದು ಇತ್ತೀಚೆಗೆ ಹೇಳಿದ್ದಾರೆ.

ಅಚಿಂತಾ ಶೆಯುಲಿ ದಾಖಲೆಗಳು

ಕಳೆದ 2-3 ವರ್ಷಗಳಲ್ಲಿ, ಅಚಿಂತಾ ಶೆಯುಲಿ ವೇಟ್‌ಲಿಫ್ಟರ್ ಆಗಿ ಭಾರತದ ಅತ್ಯಂತ ಪ್ರತಿಭಾವಂತ ಯುವ ವೇಟ್‌ಲಿಫ್ಟರ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರು 2018 ಮತ್ತು 2021 ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಪದಕವನ್ನು ಗೆದ್ದಿದ್ದಾರೆ ಹಾಗೂ 73 ಕೆಜಿ ಪುರುಷರ ವಿಭಾಗದಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಅಚಿಂತಾ ಶೆಯುಲಿ, ಅವರ ಇತ್ತೀಚಿನ ಪ್ರದರ್ಶನಗಳ ಆಧಾರದ ಮೇಲೆ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಗಾಗಿ 12 ಸದಸ್ಯರ ಭಾರತೀಯ ವೇಟ್‌ಲಿಫ್ಟಿಂಗ್ ಸ್ಕ್ವಾಡ್‌ನ ಭಾಗವಾಗಿ ಆಯ್ಕೆಯಾದರು. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕ ಗೆದ್ದು ತಮ್ಮ ಚೊಚ್ಚಲ ಪ್ರವೇಶ ಮಾಡಿದ್ದಾರೆ.

ಅಚಿಂತಾ ಶೆಯುಲಿ ಅವರ 143 ಕೆಜಿ ಪ್ರಯತ್ನವು ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ಒಡೆದುಹಾಕಲು ಮತ್ತು ಅವರ ವೈಯಕ್ತಿಕ ಅತ್ಯುತ್ತಮತೆಯನ್ನು ಸುಧಾರಿಸಲು ಸಹಾಯ ಮಾಡಿತು. ಇಂದು ಚಿನ್ನ ಗೆಲ್ಲುವ ಮೂಲಕ ಅಪ್ರತಿಮ ಸಾಧನೆಯನ್ನು ಮಾಡಿ ದೇಶವೇ ಅಚ್ಚರಿ ಪಡುವಂತೆ ಮಾಡಿದ್ದಾರೆ.

ಬಡತನದ ಬೇಗೆಯಿಂದ ಬಂದು ಸತತ ಪರಿಶ್ರಮ ಸಾಧನೆಯ ಛಲದೊಂದಿಗೆ ಸಾಗಿ ಚಿನ್ನ ಗೆದ್ದಿರುವ ಅಚಿಂತಾ ಶೆಯುಲಿ ಅವರ ಬದುಕಿನ ಕಠಿಣ ಪಯಣವು ನಿಜಕ್ಕೂ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ.


Share news

Related Articles

Leave a Reply

Your email address will not be published. Required fields are marked *

Back to top button