ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್ ನ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸಂಕೇತ್ ಸಾಗರ್

Share news

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ನ ಪ್ರಾರಂಭವಾಗಿ ಎರಡು ದಿನವಾಗಿದ್ದು, ವೇಟ್ ಲಿಫ್ಟಿಂಗ್ ನ ಪುರುಷರ 55 ಕೆ.ಜಿ ವಿಭಾಗದಲ್ಲಿ ಭಾರತದ ಮಹಾರಾಷ್ಟ್ರ ಮೂಲದ ಸಂಕೇತ್ ಮಹಾದೇವ್ ಸಾಗರ್ 248 ಕೆಜಿ ಬಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತನ್ನ ಖಾತೆಯನ್ನು ತೆರೆದಿದೆ.

ಮಲೇಷ್ಯಾದ ಅನಿಕ್ 249 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದರೆ, ಭಾರತದ 21 ವರ್ಷದ ವೇಟ್ ಲಿಫ್ಟರ್ 113 ಕೆಜಿ ಸ್ನ್ಯಾಚ್ ಹಾಗೂ 135 ಕೆಜಿ ಕ್ಲೀಜ್ ಅಂಡ್ ಜರ್ಕ್ ಒಟ್ಟಾರೆ 248 ಕೆಜಿ ಬಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕವನ್ನು ಯಶಸ್ವಿಯಾಗಿ ಮುಡಿಗೇರಿಸಿಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ತನ್ನ ಮೊದಲ ಪದಕ ಗೆಲ್ಲುವುದರೊಂದಿಗೆ ಖಾತೆ ತೆರೆದಿದೆ. ಇದು ಭಾರತಕ್ಕೆ ಹೆಮ್ಮೆಯ ಸಂಗತಿ.


Share news

Related Articles

Leave a Reply

Your email address will not be published. Required fields are marked *

Back to top button