ಕ್ರೀಡೆಪ್ರೇರಣೆ

ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು ಸಾಧನೆಯ ಬದುಕು

Share news

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ನ ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಪಂದ್ಯದ ಮೊದಲ ಸುತ್ತಿನಲ್ಲಿ 84 ಕೆಜಿ ಭಾರ ಎತ್ತಿ, ಎರಡನೇ ಸುತ್ತಿನಲ್ಲಿ 88 ಕೆಜಿ ಭಾರ ಎತ್ತಿ 12 ಕೆಜಿ ಮುನ್ನಡೆಯಿಂದ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಮೀರಾಬಾಯಿ ಚಾನು ಯಾರು?

ಮೀರಾಬಾಯಿ ಚಾನು ಮಣಿಪುರದ ರಾಜಧಾನಿ ಇಂಫಾಲ್‌ನವರು. ಆಗಸ್ಟ್ 8, 1994 ರಂದು ಜನಿಸಿದರು. 11 ವರ್ಷವಿರುವಾಗ ಸ್ಥಳೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿದರು. ವಿಶ್ವ ಮತ್ತು ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ಗಳಲ್ಲಿ ಸ್ಪರ್ಧಿಸಲು ಮುಂದಾದರು. ಸಣ್ಣ ವಯಸ್ಸಿನಲ್ಲೇ ಎರಡರಲ್ಲೂ ಪದಕಗಳನ್ನು ಗೆದ್ದು ಸಾಧಸಿದರು. ಭಾರತೀಯ ವೇಟ್ ಲಿಫ್ಟರ್ ಕುಂಜರಾಣಿ ದೇವಿ ಅವರ ಆರಾಧ್ಯ ದೈವ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಚಿಕ್ಕ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ರಂಗದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿ ಅಂತರರಾಷ್ಟ್ರೀಯ ಪದಕಗಳನ್ನು ಗಳಿಸಿದರು ಮತ್ತು ಟೋಕಿಯೊ ಒಲಿಂಪಿಕ್ಸ್ 2020 ರ ಮೀರಾಬಾಯಿ ಚಾನು ಅವರನ್ನು ನೆಚ್ಚಿನ ಆಟಗಾರ್ತಿ ಎಂದು ಪರಿಗಣಿಸಲಾಗಿತ್ತು.

ಮೀರಾಬಾಯಿ ಚಾನು 20 ನೇ ವಯಸ್ಸಿನಲ್ಲಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ 2014 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು, ಅಂತರಾಷ್ಟ್ರೀಯ ವೇದಿಕೆಗೆ ಪಾದಾರ್ಪಣೆ ಮಾಡಿದರು. 2017 ರಲ್ಲಿ ಕ್ಯಾಲಿಫೋರ್ನಿಯಾದ ಅನಾಹೈಮ್‌ನಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಚಿನ್ನ ಗೆದ್ದರು. ಎರಡು ದಶಕಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಟ್‌ಲಿಫ್ಟರ್ ಆಗಿದ್ದರೆ.

2018 ರಲ್ಲಿ ಚಾನು ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿತು, ಇದು ಆ ವರ್ಷ ಯಾವುದೇ ಪಂದ್ಯಾವಳಿಗಳಲ್ಲಿ ಸ್ಪರ್ಧಿಸದಂತೆ ತಡೆಯಿತು. ಆದರೆ ಛಲ ಬಿಡದೆ 2019 ರಲ್ಲಿ ಅವರು ಥೈಲ್ಯಾಂಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರೂ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 200 ಕೆಜಿ ತಡೆಗೋಡೆ ಮುರಿದು ಸಾಹಸ ಮೆರೆದರು ಮೀರಾಬಾಯಿ ಚಾನು.

ಏಪ್ರಿಲ್‌ನಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ಕ್ಲೀನ್ ಮತ್ತು ಜರ್ಕ್‌ನಲ್ಲಿ 119 ಕೆಜಿ ಎತ್ತುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಚಾನುವನ್ನು ಹೊಗಳಿ 2 ಮಿಲಿಯನ್ ರೂಪಾಯಿಗಳ ಉಡುಗೊರೆಯಾಗಿ ನೀಡಿದರು.

ರಿಯೊ ಒಲಿಂಪಿಕ್ಸ್‌ಗಾಗಿ 2016 ರ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಚಾನು ಭಾರತದ ಮಾಜಿ ವೇಟ್‌ಲಿಫ್ಟರ್ ಮತ್ತು ಅವರ ಆರಾಧ್ಯ ದೈವ ಕುಂಜರಾಣಿ ದೇವಿ ಅವರ 12 ವರ್ಷಗಳ ಹಳೆಯ ದಾಖಲೆಯನ್ನು ಮುರಿದು, ರಿಯೊ ಒಲಿಂಪಿಕ್ಸ್‌ನ ರಾಷ್ಟ್ರೀಯ ಪಟ್ಟಿಯಲ್ಲಿ ಸ್ಥಾನ ಗಳಿಸಿದರು. 2018 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನವನ್ನು ಪಡೆದರು. ಚಾನು ಅವರಿಗೆ ಭಾರತ ಸರ್ಕಾರವು 2018 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಇಂದು 2022 ರ ಕಾಮನ್ವೆಲ್ತ್ ಗೇಮ್ಸ್ ನ ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಮತ್ತೋಮ್ಮೆ ಇತಿಹಾಸ ಬರೆದು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಹೀಗೆ ಸಾಧನೆಯ ಹೆಜ್ಜೆಗಳನ್ನು ನೋಡುತ್ತಾ ಹೋದರೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿ ನಿಲ್ಲುವ ಭಾರತೀಯ ಕ್ರೀಡಾಪಟು ಮೀರಾಬಾಯಿ ಚಾನು.


Share news

Related Articles

Leave a Reply

Your email address will not be published. Required fields are marked *

Back to top button