ಕ್ರೀಡೆ

ಚಿನ್ನದ ಪದಕ ಗೆದ್ದ ಭಾರತದ ಹೆಮ್ಮೆಯ ಸುಪುತ್ರಿ ಪಿ.ವಿ ಸಿಂಧು

Share news

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟ 2022 ರ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಕೆನಾಡ ಆಟಗಾರ್ತಿ ಮಿಚೆಲ್ ಲೀ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಯಶಸ್ವಿಯಾಗಿ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ. ಭಾರತ ಇದುವರೆಗೆ ಗಳಿಸಿದ ಪದಕಗಳ ಸಂಖ್ಯೆ ಈಗ 55 ಕ್ಕೆ‌ಏರಿದೆ. ಈ ಪೈಕಿ 18 ಚಿನ್ನ, 15 ಬೆಳ್ಳಿ ಹಾಗೂ 22 ಕಂಚು ಗೆದ್ದು ಭಾರತ ಸ್ಥಾನ ಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿದೆ.

ಪಿ.ವಿ ಸಿಂಧು ಯಾರು?

ಪಿ.ವಿ ಸಿಂಧು ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ಭಾರತದ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು. ಅವರು 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಸೇರಿದಂತೆ ಒಲಿಂಪಿಕ್ಸ್ ಮತ್ತು BWF ಸರ್ಕ್ಯೂಟ್‌ನಂತಹ ವಿವಿಧ ಪಂದ್ಯಾವಳಿಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.

ಪಿವಿ ಸಿಂಧು ಜುಲೈ 5, 1995 ರಂದು ಹೈದರಾಬಾದ್‌ನಲ್ಲಿ ತಂದೆ ರಮಣ ಮತ್ತು ತಾಯಿ ಪಿ.ವಿಜಯಗೆ ಜನಿಸಿದರು. ಆಕೆಯ ಪೋಷಕರು ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ಆಟಗಾರರಾಗಿದ್ದಾರೆ. ಸಿಂಧು ಅವರ ತಂದೆ 1986ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ತಂಡದ ಸದಸ್ಯರಾಗಿದ್ದರು. ಪಿ.ವಿ ಸಿಂಧು ಅವರು ಕ್ರೀಡೆಗೆ ನೀಡಿದ ಕೊಡುಗೆಗಾಗಿ ಅವರು 2000 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು.

ಪಿ.ವಿ ಸಿಂಧು ಅವರು ತಮ್ಮ ಶಾಲಾ ಶಿಕ್ಷಣವನ್ನು ಹೈದರಾಬಾದ್‌ನ ಆಕ್ಸಿಲಿಯಮ್ ಹೈಸ್ಕೂಲ್‌ನಲ್ಲಿ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಹೈದರಾಬಾದ್‌ನ ಸೇಂಟ್ ಆನ್ಸ್ ಮಹಿಳಾ ಕಾಲೇಜಿನಲ್ಲಿ ಮಾಡಿದರು. 2001 ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್ ಅವರ ಪ್ರೇರಣೆಯಿಂದ ಸಿಂಧು ಬ್ಯಾಡ್ಮಿಂಟನ್ ಅನ್ನು ತಮ್ಮ ವೃತ್ತಿಯಾಗಿ ಆಯ್ಕೆ ಮಾಡಿದರು.

ಜುಲೈ 2013 ರಿಂದ ಪಿವಿ ಸಿಂಧು ಅವರು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹೈದರಾಬಾದ್ ಕಚೇರಿಯಲ್ಲಿ ಸಹಾಯಕ ಕ್ರೀಡಾ ವ್ಯವಸ್ಥಾಪಕರಾಗಿ ಉದ್ಯೋಗಿಯಾಗಿದ್ದಾರೆ. 2016 ರಲ್ಲಿ, ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಅವರಿಗೆ ಡೆಪ್ಯೂಟಿ ಸ್ಪೋರ್ಟ್ಸ್ ಮ್ಯಾನೇಜರ್ ಆಗಿ ಬಡ್ತಿ ನೀಡಿತು. ಅವರು ಬ್ರಿಡ್ಜ್‌ಸ್ಟೋನ್ ಇಂಡಿಯಾದ ಮೊದಲ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡರು. 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ, ಸಿಂಧು ಭಾರತದ ಧ್ವಜಧಾರಿಯಾಗಿದ್ದರು.

ಪಿ.ವಿ ಸಿಂಧು ಅವರು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆದ ಮೊದಲ ಮತ್ತು ಏಕೈಕ ಭಾರತೀಯ ಮಹಿಳೆ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸತತ ಎರಡು ಬಾರಿ ಪದಕಗಳನ್ನು ಗೆದ್ದ ಭಾರತದ ಎರಡನೇ ಕ್ರೀಡಾಪಟು. ಹೀಗೆ ಅನೇಕ ಸಾಧನೆಗಳನ್ನು ದಾಖಲೆಗಳನ್ನು ಮುಡಿಗೆರಿಸಿಕೊಂಡ ಹೆಮ್ಮೆಯ ಸುಪುತ್ರಿ ಪಿ.ವಿ ಸಿಂಧು.

ಪ್ರಶಸ್ತಿಗಳು

1.ಜನವರಿ 2020 ರಲ್ಲಿ, ಪಿವಿ ಸಿಂಧು ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಲಾಯಿತು

2.ಮಾರ್ಚ್ 2015 ರಲ್ಲಿ, ಸಿಂಧು ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಲಾಯಿತು.

3.ಆಗಸ್ಟ್ 2016 ರಲ್ಲಿ, ಅವರು ಭಾರತದ ಅತ್ಯುನ್ನತ ಕ್ರೀಡಾ ಗೌರವವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದರು.

4.ಸೆಪ್ಟೆಂಬರ್ 2013 ರಲ್ಲಿ, ಪಿ.ವಿ ಸಿಂಧು ಅವರಿಗೆ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

5.FICCI ಯಿಂದ 2014 ರ ವರ್ಷದ ಬ್ರೇಕ್ಥ್ರೂ ಕ್ರೀಡಾಪಟು ಎಂದು ಬಿರುದು ನೀಡಲಾಯಿತು.

6.2015 ರ ಮಕಾವು ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಗೆಲುವಿಗಾಗಿ ಅವರು ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದ US$14,000 ಪಡೆದರು.

7.2016 ರ ರಿಯೊ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದರು.

8.ತೆಲಂಗಾಣ ಸರ್ಕಾರದಿಂದ ಭೂಮಿಯನ್ನು ಅನುದಾನವಾಗಿ ಪಡೆದರು.

9.ದೆಹಲಿ ಸರ್ಕಾರದಿಂದ US$280,000 ಪಡೆದರು.

10.ಸಚಿನ್ ತೆಂಡೂಲ್ಕರ್ ಮತ್ತು ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯಿಂದ, ಸಿಂಧು ಬಿಎಂಡಬ್ಲ್ಯು ಕಾರನ್ನು ಪಡೆದರು.

11.ಕೀರ್ತಿಲಾಲರು ಆಕೆಗೆ ವಜ್ರಗಳಿಂದ ಕೂಡಿದ ಚಿನ್ನದ ಬ್ಯಾಡ್ಮಿಂಟನ್ ರಾಕೆಟ್ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು.

ತನ್ನ ಆಟದ ಮೂಲಕ ಅನೇಕ ಪದಕಗಳನ್ನು ಗೆದ್ದು ಭಾರತವು ಹೆಮ್ಮೆ ಪಡುವಂತೆ ಮಾಡಿದ ಅತ್ಯುನ್ನತ ಕ್ರೀಡಾಪಟು ಪಿ.ವಿ ಸಿಂಧು ಇದೀಗ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ. ಪಿ.ವಿ ಸಿಂಧು ನಡೆದು ಬಂದ ಹಾದಿ ಮಾಡಿದ ಸಾಧನೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿತ್ತದೆ.


Share news

Related Articles

Leave a Reply

Your email address will not be published. Required fields are marked *

Back to top button