ಕ್ರೀಡೆ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಂಚಲನ ಸೃಷ್ಟಿಸಿದ ಕುಸ್ತಿಪಟುಗಳು

Share news

ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022 ರಲ್ಲಿ ಕುಸ್ತಿಪಟುಗಳು ತಮ್ಮ ಕ್ರೀಡಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ಬಜರಂಗ್ ಪುನಿಯಾ, ಸಾಕ್ಷಿ ಮಾಲಿಕ್ ಮತ್ತು ದೀಪಕ್ ಪುನಿಯಾ ಯಶಸ್ವಿಯಾಗಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಭಾರತ 26 ಪದಕಗಳನ್ನು 9 ಚಿನ್ನ, 8 ಬೆಳ್ಳಿ, 9 ಕಂಚು ಗೆಲ್ಲುವ ಮೂಲಕ ಕಾಮನ್ವೆಲ್ತ್ ಗೇಮ್ಸ್ ಸ್ಥಾನ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆ.

ದೀಪಾಕ್ ಪುನಿಯಾ ಫ್ರೀ ಸ್ಟೈಲ್ ಕುಸ್ತಿ 86ಕೆಜಿ ವಿಭಾಗದಲ್ಲಿ ಪಾಕಿಸ್ತಾನದ ಆಟಗಾರ ಇನಾಮ್ ಪೈ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. 2019 ರಲ್ಲಿ ನೂರ್-ಸುಲ್ತಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಏಕೈಕ ಬೆಳ್ಳಿ ಪದಕವನ್ನು ಗೆದ್ದು ಪುನಿಯಾ ಗಮನ ಸೆಳೆದಿದ್ದರು .ಎರಡು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಬೆಳ್ಳಿ (ಅಲ್ಮಾಟಿ 2021, ಉಲಾನ್‌ಬಾತರ್ 2022), ಜೊತೆಗೆ ಎರಡು ಕಂಚಿನ ಪದಕಗಳನ್ನು (ಕ್ಸಿಯಾನ್ 2019, ದೆಹಲಿ) ಗೆದ್ದು ಇತಿಹಾಸ ನಿರ್ಮಿಸಿದ್ದು ಇದೀಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದಿದ್ದಾರೆ.

ಫ್ರೀಸ್ಟೈಲ್ ಕುಸ್ತಿಯಲ್ಲಿ ಮಹಿಳೆಯರ 62 kg ವಿಭಾಗದಲ್ಲಿ ಕೆನಾಡದ ಅನಾ ಗೊಡೆನೆಜ್ ಅವರನ್ನು ಸೋಲಿಸಿ 22ವರ್ಷದ ಸಾಕ್ಷಿ ಮಲಿಕ್ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ರಿಯೊ 2016 ರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಯನ್ನು ಗಳಿಸಿ ಭವಿಷ್ಯದ ಪೀಳಿಗೆಯ ಮಹಿಳಾ ಕುಸ್ತಿಪಟುಗಳಿಗೆ ಮಾದರಿಯಾಗಿದ್ದರು. ಹಲವಾರು ದಾಖಲೆಗಳನ್ನು ಈವರೆಗೆ ನಿರ್ಮಿಸಿರುವ ಕುಸ್ತಿಪಟು ಸಾಕ್ಷಿ ಮಲಿಕ್.

ಕೇವಲ 12 ನೇ ವಯಸ್ಸಿನಲ್ಲಿ, ಅವರು ಈಶ್ವರ್ ದಹಿಯಾ ಅವರ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು ಮತ್ತು ಐದು ವರ್ಷಗಳ ನಂತರ, ಅವರು 2009 ರ ಏಷ್ಯನ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 59 ಕೆಜಿ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಮೊದಲ ಯಶಸ್ಸಿನ್ನು ಅನುಭವಿಸಿದರು, ನಂತರ 2010 ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಪಡೆದರು. .

2013 ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ನಂತರ, ಮುಂದಿನ ವರ್ಷ ಗ್ಲಾಸ್ಗೋದಲ್ಲಿ ತನ್ನ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು ಮತ್ತು 58 ಕೆಜಿ ಫೈನಲ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಹೊರಬಂದರು. 62 ಕೆಜಿ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ 2018 ರಲ್ಲಿ ತನ್ನ ಎರಡನೇ ಮತ್ತು ಅಂತಿಮ ಕಾಮನ್ವೆಲ್ತ್ ಕ್ರೀಡಾಕೂಟದ ಪದಕವನ್ನು ಗಳಿಸಿದರು. ಇದೀಗ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತೇ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

ಫ್ರೀಸ್ಟೈಲ್ ಕುಸ್ತಿಯ ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್ ಪುನಿಯಾ ಕೆನಾಡದ ಲಾಚಲನ್ ಮೆಕ್ ನೀಲ್ ಅವರನ್ನು 2-9 ಪಾಯಿಂಟ್ ಗಳಿಂದ ಸೋಲಿಸಿ ಚಿನ್ನದ ಪದಕ ಗಳಿಸಿದ್ದಾರೆ. ಮೊದಲಿನಿಂದಲೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದು, 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ 2018ರಲ್ಲಿ ಚಿನ್ನದ ಪದಕ ಗೆದ್ದಿದ್ದರು ಇದೀಗ ಮತ್ತೇ 2022 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಹೀಗೆ ಕುಸ್ತಿಪಟುಗಳು ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿ ವಿಶ್ವ ರಂಗದಲ್ಲೇ ಸಂಚಲ ಸೃಷ್ಟಿಸಿದ್ದು ಭಾರತಕ್ಕೆ ಹೆಮ್ಮೆ ಹಾಗೂ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಭಿನಂದನೆ ಸಲ್ಲಿಸಿದ್ದು , ದೇಶವೇ ಸಂತಸ ವ್ಯಕ್ತಪಡಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button