ರಾಜ್ಯ

ಅರಣ್ಯ ಇಲಾಖೆಗೆ ಏಳು ವರ್ಷಗಳ ಕಾಲ ತನ್ನ ಅಪರಿಮಿತ ಸೇವೆ ಸಲ್ಲಿಸಿದ ರಾಣಾಗೆ ಅಂತಿಮ ವಿದಾಯ

Share news

ಕರ್ನಾಟಕದ ಅರಣ್ಯ ಇಲಾಖೆಗೆ ಸೇರ್ಪಡಗೊಂಡಿದ್ದ ಮೊದಲ ಶ್ವಾನ 7 ವರ್ಷಗಳಿಂದ ತನ್ನ ಸಾಹಸದ ಮೂಲಕ ಕಾಡುಗಳ್ಳರ ನಿದ್ರೆಯನ್ನೇ ಕೆಡಿಸಿದ್ದ ಸುಮಾರು 10 ವರ್ಷದ ಜರ್ಮನ್ ಶೆಫರ್ಡ್ ತಳಿಯ ಶ್ವಾನ ರಾಣಾ ಅಸುನೀಗಿದೆ.

ಏಳು ವರ್ಷಗಳ ಸೇವಾವಧಿಯಲ್ಲಿ ರಾಣಾ ಸುಮಾರು 8 ಹುಲಿ ಸಂಬಂಧಿತ ಪ್ರಕರಣಗಳು, 45ಕ್ಕೂ ಹೆಚ್ಚು ಚಿರತೆ ಸಂಬಂಧಿತ ಪ್ರಕರಣಗಳು, ಹಲವಾರು ಮರಗಳ್ಳತನ ಪ್ರಕರಣಗಳು, ಉರುಳು ಪತ್ತೆ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಲ್ಲದೇ ದಿನ ನಿತ್ಯದ ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆಯ ಚಟುವಟಿಕೆಗಳಲ್ಲಿ ಸದಾ ತನ್ನದೇ ಆದ ಹೆಜ್ಜೆ ಮೂಡಿಸಿದ ಅಪರೂಪದ ಶ್ವಾನ.

28 ಡಿಸೆಂಬರ್ 2013 ರಲ್ಲಿ ಜನಿಸಿದ ಜರ್ಮನ್ ಶೆಫರ್ಡ್ ತಳಿ ರಾಣಾ ಭೂಪಾಲ್‍ನ ವಿಶೇಷ ಸಶಸ್ತ್ರ ಪಡೆಗಳ 28ನೇ ಬೆಟಾಲಿಯನ್‍ನಲ್ಲಿ ತರಬೇತಿಯನ್ನು ಪಡೆದು ಬಂಡೀಪುರದಲ್ಲಿ ಅರಣ್ಯದಲ್ಲಿ ನಡೆಯುತ್ತಿದ್ದ ಆಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಲ್ಲಿ ತನ್ನ ಕರ್ತವ್ಯ ನಿರ್ವಹಿಸಿತು.

ಪ್ರಾರಂಭದಲ್ಲಿಯೇ ಎನ್.ಬೇಗೂರು ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರ ಕಡಿದ ಮೂವರನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿತ್ತು. ಬಳಿಕ ಶ್ರೀಗಂಧ ಕಳ್ಳ ಸಾಗಣೆ ಹೀಗೆ ಅನೇಕ ಪ್ರಕರಣಗಳಲ್ಲಿ ಅರಮ್ಯ ಅಧಿಕಾರಿಗಳಿಗೆ ಸಹಾಯ ಮಾಡಿ ಅರಣ್ಯ ಇಲಾಖೆಗೆ ಆಪ್ತವಾಗಿದ್ದ ಶ್ವಾನ ರಾಣಾ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಲ್ಲದೇ ರಾಜ್ಯದ ವಿವಿಧ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿ, ಚಿರತೆಯಂತಹ ಪ್ರಾಣಿಗಳ ಸ್ಥಳಗಳನ್ನು ಗುರುತು ಮಾಡಿಕೊಟ್ಟು ಸೆರೆ ಹಿಡಿಯುವ ಕಾರ್ಯಾಚರಣೆಗಳಿಗೆ ಯಶಸ್ಸು ತಂದುಕೊಟ್ಟಿತ್ತು.

ರಾಣಾ ಅಸುನೀಗಿದ್ದು ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ವಿಶೇಷ ಹುಲಿ ಸಂರಕ್ಷಣಾ ದಳ ನೆರವೇರಿಸಿ ಕಂಬನಿ ಮಿಡಿದಿದ್ದಾರೆ. ರಾಣಾ ದೇಶಕ್ಕಾಗಿ ಅರಣ್ಯಕ್ಕಾಗಿ ನೀಡುವ ಸೇವೆ ನಿಜಕ್ಕೂ ಶ್ಲಾಘನೀಯ.


Share news

Related Articles

Leave a Reply

Your email address will not be published. Required fields are marked *

Back to top button