ರಾಜ್ಯ
Trending

ವಿಷ್ಣುಗುಪ್ತ ವಿಶ್ವವಿದ್ಯಾನಿಲಯದ ಸಾರ್ವಭೌಮ ಗುರುಕುಲಕ್ಕೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Share news

ಭಾರತೀಯ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಯಲ್ಲಿ ಉಳಿಸಿ ಬೆಳೆಸುವ ಮಹತ್ಸಂಕಲ್ಪದೊಂದಿಗೆ ಶ್ರೀರಾಮಚಂದ್ರಾಪುರಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಗುರುಕುಲದಲ್ಲಿ 4 ರಿಂದ 12ನೇ ತರಗತಿವರೆಗೆ ವಸತಿಯುತ ಶಿಕ್ಷಣ ಸೌಲಭ್ಯವಿದೆ. ಜಾತಿ ಮತಗಳ ಬೇಧವಿಲ್ಲದೇ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣಗಳ ಸಮ್ಮಿಲನವಿರುವ ದೇಶದ ಏಕೈಕ ಗುರುಕುಲ ಇದಾಗಿದ್ದು, ಪಠ್ಯದ ಜತೆಗೆ ಜೀವನ ಮೌಲ್ಯಗಳಿಗೂ ಒತ್ತು ನೀಡಿ ಮಕ್ಕಳ ಸವಾರ್ಂಗೀಣ ಪ್ರಗತಿಗೆ ಇಲ್ಲಿನ ಶಿಕ್ಷಣ ನೆರವಾಗಲಿದೆ.

ನಿಗದಿತ ಪಠ್ಯದ ಜತೆಗೆ ಯೋಗ, ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಸಂಗೀತ, ವಾದ್ಯ, ನೃತ್ಯ, ಚಿತ್ರ, ಯಕ್ಷಗಾನ, ಕುದುರೆ ಸವಾರಿ ಕಳರಿಪಯಟ್, ಕರಕುಶಲಕಲೆ, ರಂಗೋಲಿ ಕಸೂತಿ, ಪಾರಂಪರಿಕ ಪಾಕಶಾಸ್ತ್ರ, ಗೃಹನಿರ್ವಾಹ ಹೀಗೆ ಪ್ರಾಚೀನ ಭಾರತದ ಅಪೂರ್ವ ಕಲೆಗಳನ್ನು ಒಂದೇ ಸೂರಿನಡಿ ಮಕ್ಕಳಿಗೆ ಬೋಧಿಸಲಾಗುತ್ತದೆ.ಸಿಇಟಿ/ ಜೆಇಇ/ನೀಟ್/ಸಿಎ/ಸಿಎಸ್ ಪರೀಕ್ಷೆಗಳಿಗೂ ತರಬೇತಿ ವ್ಯವಸ್ಥೆ ಇದೆ. ಭಾರತೀಯ ಹಬ್ಬ- ಹರಿದಿನಗಳ ಆಚರಣೆಯ ಜತೆಗೆ ಸೂಕ್ತ ವಸತಿಯ ಜತೆಗೆ ಉತ್ತಮ ಸಾತ್ವಿಕ ಆಹಾರ ನೀಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ :

9449495247, 9449595248 ಸಂಪರ್ಕಿಸಬಹುದು.

ಇ-ಮೇಲ್: office@vishnuguptavvv.org: www. vishnuguptavv.orgನ್ನು ಸಂಪರ್ಕಿಸಬಹುದು


Share news

Related Articles

Leave a Reply

Your email address will not be published. Required fields are marked *

Back to top button