Othersರಾಜ್ಯ

ಕರ್ನಾಟಕ ರಾಜ್ಯದಲ್ಲಿ ಬಡವರ ಪ್ರಮಾಣ ಇಳಿಕೆ | ನೀತಿ ಆಯೋಗದ ವರದಿಯಲ್ಲಿ ಏನಿದೆ ? ಶೇಕಡಾವಾರು ಪಟ್ಟಿ ಇಲ್ಲಿದೆ..

Share news

ಕೊರೊನಾ ಲಾಕ್ ಡೌನ್, ಬಳಿಕ ಎದುರಾದ ಆರ್ಥಿಕ ಸಂಕಷ್ಟಗಳ ನಡುವೆಯೂ ರಾಜ್ಯದಲ್ಲಿ 34.87 ಲಕ್ಷ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ. ಯಾದಗಿರಿ ಅತೀ ಹೆಚ್ಚು ಬಡವರನ್ನು ಹೊಂದಿರುವ, ರಾಮನಗರ ಅತೀ ಕಡಿಮೆ ಬಡವರನ್ನು ಹೊಂದಿರುವ ಜಿಲ್ಲೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿರುವ ಬಡತನ ಸೂಚ್ಯಂಕ ಪರಿಶೀಲನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?

ಪೌಷ್ಟಿಕ ಆಹಾರದ ಲಭ್ಯತೆ, ಮಾನಸಿಕ ಮತ್ತು ದೈಹಿಕ ಆರೋಗ್ಯ, ಮಗುವಿನ ಶಾಲಾ ದಾಖಲಾತಿ ವರ್ಷ ಹೀಗೆ 12 ಸೂಚ್ಯಂಕಗಳನ್ನು ಆಧಾರವಾಗಿಸಿ ಬಡತನದ ತೀವ್ರತೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ತಲಾ ಎಣಿಕೆ ಅನುಪಾತವನ್ನು ಆಧರಿಸಿ ಎನ್ಎಂಪಿಐ (ನ್ಯಾಶನಲ್ ಮಲ್ಟಿ ಡೈಮೆನನ್ ಇಂಡೆಕ್ಸ್) ವರದಿ ಬಿಡುಗಡೆ ಮಾಡಿರುವ ನೀತಿ ಆಯೋಗ ಬಡತನದ ಪ್ರಮಾಣ ಕಡಿಮೆ ಆಗಿರುವುದಾಗಿ ಪ್ರಕಟಿಸಿದೆ.

ಶೇಕಡಾವಾರು ಪಟ್ಟಿ ಇಲ್ಲಿದೆ…

34.87 ಲಕ್ಷಮಂದಿ ಬಡತನದಿಂದ ಹೊರಗೆ ಉಳಿದಿದ್ದಾರೆ.

ಅತೀ ಕಡಿಮೆ ಬಡವರಿರುವ ಜಿಲ್ಲೆ

ರಾಮನಗರ – ಶೇ. 0.88

ಬೆಂ. ಗ್ರಾಮಾಂತರ – ಶೇ. 0.99

ಬೆಂಗಳೂರು ನಗರ – ಶೇ. 1.47

ದಕ್ಷಿಣ ಕನ್ನಡ – ಶೇ. 1.71

ಕೋಲಾರ – ಶೇ. 1.78

ಬೆಳೆ ವಿಮೆ ಪಡೆಯಲು ನೋಂದಣಿ ಆರಂಭ | ಇಲ್ಲಿದೆ ಮಾಹಿತಿ..

ಅತೀ ಹೆಚ್ಚು ಬಡವರಿರುವ ಜಿಲ್ಲೆ

ಯಾದಗಿರಿ – ಶೇ. 25.38

ರಾಯಚೂರು – ಶೇ. 20.19

ಕಲಬುರಗಿ – ಶೇ. 18.63

ಕೊಪ್ಪಳ – ಶೇ. 18.04

ವಿಜಯಪುರ – ಶೇ. 16.30

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ |  ಇಲ್ಲಿದೆ ಮಾಹಿತಿ..

ರಾಜ್ಯದ ಜನರ ಸ್ಥಿತಿಗತಿ :

ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ 36.20.ಮಂದಿಗೆ ಸ್ವಂತ ವಸತಿಯಿಲ್ಲ. ಶೇಕಡಾ 29.97 ರಷ್ಟು ಮಂದಿ ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿದ್ದಾರೆ. ಮಕ್ಕಳು ಹಾಗೂ ಯುವ ಸಮುದಾಯದ ಸಾವಿನ ಪ್ರಮಾಣ ಶೇಕಡಾ 1.29ರಷ್ಟಿದೆ. ಶೇಕಡಾ 7.89ರಷ್ಟು ಮಕ್ಕಳು ಸರಿಯಾದ ವಯಸ್ಸಿಗೆ ಶಾಲೆಗೆ ಸೇರುತ್ತಿಲ್ಲ. ಶೇಕಡಾ 2.50ರಷ್ಟು ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ. ಶೇಕಡಾ 21.47ರಷ್ಟು ಮಂದಿಗೆ ಅಡುಗೆ ಇಂಧನ ಬಳಕೆ ಕೊರತೆಯಿದೆ. ಶೇಕಡಾ 12.58ರಷ್ಟು ಮಂದಿ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇಕಡಾ 0.89ರಷ್ಟು ಮಂದಿಗೆ ವಿದ್ಯುತ್‌ ಸೌಲಭ್ಯವಿಲ್ಲ. ಶೇಕಡಾ 4.97ರಷ್ಟು ಮಂದಿ ಬ್ಯಾಂಕ್‌ ಖಾತೆ ಹೊಂದಿಲ್ಲ. ಶೇಕಡಾ 7.06ರಷ್ಟು ಮಂದಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?


Share news

Related Articles

Leave a Reply

Your email address will not be published. Required fields are marked *

Back to top button