ದಕ್ಷಿಣ ಕನ್ನಡರಾಜ್ಯ

ಯುವಶಕ್ತಿ ಸೇವಾಪಥದ ಮೂಲಕ ಶ್ರೀದೇವಿ ಪುತ್ತೂರು ಆರೋಗ್ಯನಿಧಿ ಹಸ್ತಾಂತರ

Share news

ಪ್ರತಿಭಾವಂತ ವಿದ್ಯಾರ್ಥಿನಿ, ತನ್ನ ಭಾಷಣಗಳ ಮೂಲಕ ರಾಷ್ಟೀಯವಾದದ ಚಿಂತನೆಗಳನ್ನು ಸಮಾಜಕ್ಕೆ ಬಿತ್ತುತ್ತಿದ್ದ ಶ್ರೀದೇವಿ ಪುತ್ತೂರುರವರು ತೀವ್ರ ರಸ್ತೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು ಸುಮಾರು 15 ಲಕ್ಷ ರೂ ಚಿಕಿತ್ಸಾ ವೆಚ್ಚದ ಅವಶ್ಯಕತೆಗಾಗಿ ಕುಟುಂಬ ಸದಸ್ಯರು ಸಹೃದಯಿ ಸಮಾಜದ ನೆರವನ್ನು ಬಯಸಿದ್ದರು.

ಈ ನಿಮಿತ್ತ ತಕ್ಷಣ ಕಾರ್ಯಪ್ರವೃತ್ತವಾದ ಸಾಮಾಜಿಕ ಸೇವಾ ಸಂಸ್ಥೆ ಯುವಶಕ್ತಿ ಸೇವಾಪಥ ಶ್ರೀದೇವಿ ಪುತ್ತೂರು ಆರೋಗ್ಯ ನಿಧಿ ಯೋಜನೆಯನ್ನು ಕೈಗೆತ್ತಿಕೊಂಡು ಕೇವಲ 24 ಗಂಟೆಗಳಲ್ಲಿ ಸಮಾಜದ ದಾನಿಗಳಿಂದ ಸಾಮಾಜಿಕ ಜಾಲತಾಣದ ಮೂಲಕ ರೂ 4,34,950 (ನಾಲ್ಕು ಲಕ್ಷ ಮೂವತ್ತನಾಲ್ಕು ಸಾವಿರದ ಒಂಬೈನೂರ ಐವತ್ತು ಮಾತ್ರ)ಸಂಗ್ರಹಿಸಿ ಶ್ರೀದೇವಿಯ ಹೆತ್ತವರಿಗೆ ಹಸ್ತಾಂತರಿಸಿದೆ.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಯುವಶಕ್ತಿ ಸೇವಾಪಥದ ಸದಸ್ಯರು ಮಂಗಳೂರು ಮಂಗಳಾ ಆಸ್ಪತ್ರೆಗೆ ತೆರಳಿ ಆರೋಗ್ಯ ನಿಧಿಯನ್ನು ಹಸ್ತಾಂತರಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಯುವಶಕ್ತಿ ಸೇವಾಪಥದ ಪ್ರಥಮ ವಾರ್ಷಿಕ ಸಂಭ್ರಮದ ಪ್ರಮುಖ ಭಾಷಣಗಾರ್ತಿಯಾಗಿ ಶ್ರೀದೇವಿ ಪುತ್ತೂರು ಭಾಗವಹಿಸಿದ್ದರು.

ಇನ್ನೂ ಓದಿ..ಅಡುಗೆಯ ರುಚಿ ಹೆಚ್ಚಿಸುವ ಕರಿಬೇವು ಆರೋಗ್ಯವರ್ಧಕವೂ ಹೌದು

ಅಲ್ಪಾವಧಿಯಲ್ಲಿ ದೊಡ್ಡ ಮನಸ್ಸಿನಲ್ಲಿ ಸಹಕರಿಸಿದ ಸೇವಾಬಂಧುಗಳಿಗೆ ಯುವಶಕ್ತಿ ಸೇವಾಪಥ ವಂದನೆಗಳನ್ನು ಸಮರ್ಪಿಸುತ್ತದೆ.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಥೈಲ್ಯಾಂಡ್ ನಲ್ಲಿ ಹಿಂದೂ ಧರ್ಮದ ಸಂಕೇತವಾದ ಸೃಷ್ಟಿಕರ್ತ ಬ್ರಹ್ಮ

ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಮೇಧಾ ಗಾಯಕಿಯೂ ಹೌದು!

ಕುಮಾರ ಪರ್ವತ – ಗಿರಿ ಗದ್ದೆಯ ಬೆಟ್ಟದ ಜೀವ…ಶ್ರೀ ಮಹಾಲಿಂಗೇಶ್ವರ ಭಟ್

ಕೆಲಸ ಮಾಡಲು ದೈಹಿಕ ಸಾಮರ್ಥ್ಯ ಮುಖ್ಯವಲ್ಲ, ದೃಢ ಮನಸ್ಸು ಬೇಕು ಎಂದ ಪೂರ್ಣಿಮಾ

ಯಕ್ಷಗಾನ ಕಲಾ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ


Share news

Related Articles

Leave a Reply

Your email address will not be published. Required fields are marked *

Back to top button