ಬೆಂಗಳೂರು ನಗರರಾಜ್ಯ

70 ಗಂಟೆಯೊಳಗೆ 6000ಮೀಟರ್ ಎತ್ತರದ ಎರಡು ಶಿಖರಗಳನ್ನೇರಿದ ಮೊದಲ ಕನ್ನಡಿಗ

Share news

ಲಡಾಖ್ ನ ಮೌಂಟ್ ಕಾಂಗ್ ಯಾಟ್ಸ್ || (6250 ಮೀ ) ಮತ್ತು ಮೌಂಟ್ ಡಿಜೊ ಜೊಂಗೋ (6240 ಮೀ ) ಶಿಖರಗಳನ್ನು 70 ಗಂಟೆಗಳಲ್ಲಿ ತೀವ್ರವಾದ ಶೀತ ಗಾಳಿ, ಕಷ್ಟಕರ ಪ್ರಯಾಣ, ಸಾಕಷ್ಟು ಸವಾಲುಗಳನ್ನು ಎದುರಿಸಿ ಶಿಖರದ ತುದಿ ತಲುಪಿ ಭಾರತದ ಮತ್ತು ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಕರ್ನಾಟಕದ ಬೆಂಗಳೂರಿನ ನವೀನ್ ಮಲ್ಲೇಶ್ ದಾಖಲೆ ನಿರ್ಮಿಸಿದ್ದಾರೆ. ಅವರೊಂದಿಗೆ ಉಳಿದ 5 ಮಂದಿ ಭಾರತೀಯ ಮೂಲದವರು ಶಿಖರವೇರಿದ್ದಾರೆ.

ಹವಾಮಾನ ತೀವ್ರವಾಗಿ ಕೆಟ್ಟಿದ್ದ ಕಾರಣ ಐದು ದಿನಗಳ ಕಾಲ ಪರ್ವತಾರೋಹಿಗಳು ತಮ್ಮ ಬೇಸ್ ಕ್ಯಾಂಪ್ ನಲ್ಲಿ ನೆಲೆಸಿದ್ದರು ಆದರೆ ಎದೆಗೂಂದದೆ ಮತ್ತೆ ಉತ್ಸಾಹದಿಂದ ಜುಲೈ 17 ರಿಂದ ಜುಲೈ 22 ರಂದು ಕೇವಲ 70 ಗಂಟೆಗಳಲ್ಲಿ ಕನ್ನಡಿಗ ನವೀನ್ ಮಲ್ಲೇಶ್ ಹಾಗೂ ಅವರೊಂದಿಗೆ ಐದು ಮಂದಿ ಭಾರತೀಯ ಮೂಲದ ಮುಂಬೈ,ಹರಿಯಾಣ, ಪುಣೆಯ ಪರ್ವತಾರೋಹಿಗಳು ಸೇರಿಕೊಂಡು ಎರಡು ಶಿಖರವೇರಿದ್ದಾರೆ.

ಪ್ರತಿ ಶಿಖರವೇರಲು 20 ಗಂಟೆಗಳನ್ನು ತೆಗೆದುಕೊಂಡು, ಮೊದಲು 6250 ಮೀಟರ್ ಎತ್ತರದ ಮೌಂಟ್ ಕಾಂಗ್ ಯಾಟ್ಸ್ ಶಿಖರ ಏರಿ ನಂತರ ಒಂದು ದಿನ ವಿರಾಮದ ಬಳಿಕ ಎರಡನೇ 6240 ಮೀಟರ್ ಎತ್ತರದ ಮೌಂಟ್ ಡಿಜೊ ಜೊಂಗೋ ಶಿಖರ ಏರಿದ್ದು, ತಾವು ದಾಖಲೆಗಳನ್ನು ನಿರ್ಮಿಸದೆ ತಮ್ಮ ಕೌಶಲ್ಯವನ್ನು ಪರೀಕ್ಷಿಸಿರುವುದಾಗಿ ಮಲ್ಲೇಶ್ ಹೇಳಿದ್ದಾರೆ. ಕನ್ನಡದ, ಭಾರತದ ಬಾವುಟವನ್ನು ಶಿಖರವೇರಿ ಹಾರಿಸಿ ಸಾಹಸ ಮೆರೆದ ಕನ್ನಡಿಗ ಮಲ್ಲೇಶ್ ಹಾಗೂ ಉಳಿದ ಐವರು ಭಾರತೀಯ ಪರ್ವತಾರೋಹಿಗಳ ಸಾಧನೆ ನಿಜಕ್ಕೂ ಶ್ಲಾಘನೀಯ.


Share news

Related Articles

Leave a Reply

Your email address will not be published. Required fields are marked *

Back to top button